ಭಾರತದ ಸಂವಿಧಾನ ಜಗತ್ತಿಗೆ ಮಾದರಿ

26 hkr 02
Published on

ಹಿರೇಕೆರೂರ: ವಿಶೇಷವಾದ ಸಂವಿಧಾನ ರಚಿಸುವ ಮೂಲಕ ಜಗತ್ತಿಗೆ ಮಾದರಿ ದೇಶವನ್ನಾಗಿ ಮಾಡಿದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಕಾಲೇಜ್ ಆಡಳಿತ ಮಂಡಳಿ ಉಪಾಧ್ಯಕ್ಷ ಸಿ.ಬಿ. ಮಾಳಗಿ ಹೇಳಿದರು.

ಪಟ್ಟಣದ ಸರ್ಕಾರಿ ಪಿಯು ಕಾಲೇಜ್​ನಲ್ಲಿ ಗುರುವಾರ ಆಯೋ ಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂವಿಧಾನದ ಪರಿಕಲ್ಪನೆ ಬಹು ವಿಶೇಷದಿಂದ ಕೂಡಿದೆ. ಪ್ರತಿಯೊಬ್ಬರೂ ಇಲ್ಲಿನ ಸಂವಿಧಾನಕ್ಕೆ ತಲೆಬಾಗಬೇಕು. ಕಾನೂನಿನ ಚೌಕಟ್ಟಿನಲ್ಲಿ ಜೀವನ ನಡೆಸುವುದು ಅತ್ಯಂತ ಅವಶ್ಯಕ ವಾಗಿದೆ’ ಎಂದರು.

ಸಿಡಿಸಿ ಸದಸ್ಯ ರಾಮು ಮುರಡೇಶ್ವರ, ಪ್ರಾಚಾರ್ಯರಾದ ಎಲ್. ಸಾಮ್ಯಾನಾಯ್್ಕ ಫಕೀರಪ್ಪ ಬಸಾಪುರ, ಮುಖ್ಯಶಿಕ್ಷಕ ಎನ್. ಸುರೇಶ ಕುಮಾರ, ಉಪನ್ಯಾಸಕರಾದ ತೋಟೇಶ ಕೊರವರ, ಕುಮಾರ ಮಾನೆ, ಭುವನೇಶ್ವರಿ ಕಾಡಗಿ, ಖಾಜಾಹುಸೇನ್.ಡಿ.ಎಂ. ಮುನ್ವರಲಿ ಹಳಿಯಾಳ, ಪಂಚಾಕ್ಷರಪ್ಪ ಇತರರಿದ್ದರು.

ತಂಬಾಕದ ಮಹಾವಿದ್ಯಾಲಯದಲ್ಲಿ: ಹಿರೇಕೆರೂರ ಪಟ್ಟಣದ ಬಿ.ಆರ್. ತಂಬಾಕದ ಪ್ರಥಮ ದರ್ಜೆ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ವತಿಯಿಂದ ಸಂವಿಧಾನ ದಿನ ಆಚರಿಸಲಾಯಿತು.

ಪ್ರಾಚಾರ್ಯ ಡಾ. ಎಸ್.ಬಿ. ಚನ್ನಗೌಡ್ರ ಮಾತನಾಡಿ, ‘1949 ನ. 26ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. ಈ ದಿನವನ್ನು ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನ ದಿನವೆಂದು ಘೊಷಣೆ ಮಾಡಿರುವುದು ಹೆಮ್ಮೆಯ ಪಡುವಂತಹ ವಿಷಯವಾಗಿದೆ’ ಎಂದರು.

ಉಪ ಪ್ರಾಚಾರ್ಯ ಎಂ. ಎಸ್. ನಾಗರಾಜಪ್ಪ, ಹಿರಿಯ ಉಪನ್ಯಾಸಕರಾದ ಕೆ.ಎಂ. ಮರಡಿ ಬಣಕಾರ, ರೂಪಾ ಎಂ., ಡಾ. ಪಿ.ಬಿ. ತಳವಾರ, ಸಿ.ಆರ್. ದೂದಿಹಳ್ಳಿ, ಕಿರಣ ಬಾಗಲರ, ಪುನೀತ ಕುಮಾರ ವೈ. ಎ. ಇತರರು ಇದ್ದರು. ಎನ್.ಎಸ್.ಎಸ್. ಸಂಯೋಜಕರಾದ ನಾಗರಾಜ ಎಚ್.ಪಿ., ಪ್ರವೀಣ ಕುರುವತ್ತೇರ, ಪಿ.ಎಚ್. ಗೋಪಕ್ಕಳ್ಳಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net