ವಿಶ್ವ ನಾಯಕತ್ವದ ಹೊಸ್ತಿಲಲ್ಲಿ ಭಾರತ

Upp_Leadership
Published on

ಉಪ್ಪಿನಂಗಡಿ: ಭಾರತ ವಿಶ್ವದ ನಾಯಕತ್ವವನ್ನು ವಹಿಸುವ ಹೊಸ್ತಿಲಲ್ಲಿದ್ದು , ದೇಶದ ಪ್ರತಿಯೊಂದು ಮಗುವೂ ಮುಂದಿನ 25 ವರ್ಷಗಳಲ್ಲಿ ರಾಷ್ಟ್ರದ ಪ್ರಬಲ ಶಕ್ತಿಯಾಗಿ ಮೂಡಿಬರಬೇಕಾಗಿದೆ. ಈ ಕಾರಣಕ್ಕೆ ಮಕ್ಕಳಿಗೆ ಭಯಮುಕ್ತ ಬದುಕು ನೀಡಬೇಕು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.

ಉಪ್ಪಿನಂಗಡಿಯ ವೇದಶಂಕರ ನಗರದ ಶ್ರೀರಾಮ ಶಾಲೆಯಲ್ಲಿ ಸ್ಥಾಪಿಸಲಾದ ಶ್ರೀರಾಮ, ಆಂಜನೇಯ ಮೂರ್ತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಡಾ.ಕೆ.ಜಿ.ಭಟ್ ಉದ್ಘಾಟಿಸಿದರು. ಡಾ.ತಾಳ್ತಜೆ ವಸಂತ ಕುಮಾರ ರಾಮರಕ್ಷಾ ನಿಧಿಯನ್ನು ಉದ್ಘಾಟಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್, ಲಯನ್ಸ್ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ, ವಿದ್ಯಾವರ್ಧಕ ಸಂಘದ ನಿರ್ದೇಶಕಿ ಡಾ.ಸುಧಾ ರಾವ್, ಶ್ರೀರಾಮ ಶಾಲಾಡಳಿತದ ಅಧ್ಯಕ್ಷ ಸುನಿಲ್ ಅನಾವು, ಸಂಚಾಲಕ ಯು.ಜಿ.ರಾಧಾ, ಉದಯ ಅತ್ರಮಜಲು ಮೊದಲಾದವರು ಉಪಸ್ಥಿತರಿದ್ದರು.

ಹಿರಿಯರಾದ ಚಂದಪ್ಪ ಮೂಲ್ಯ, ಸುಂದರ ಶೆಟ್ಟಿ ಎಂಜಿರಪಳಿಕೆ, ಕರುಣಾಕರ ಸುವರ್ಣ, ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಸುನಿಲ್ ದಡ್ಡು, ಬೇಬಿ ಸೋಮನಾಥ್ ಶೆಟ್ಟಿ, ಜಯಶ್ರೀ ಜನಾರ್ದನ್, ಕೆ.ರಾಘವೇಂದ್ರ ನಾಯಕ್, ಸುಧಾಕರ ಶೆಟ್ಟಿ, ಯು.ರಾಜೇಶ್ ಪೈ, ಶಶಿಧರ್ ಶೆಟ್ಟಿ, ಕೈಲಾರ್ ರಾಜಗೋಪಾಲ ಭಟ್, ರವೀಂದ್ರ ಆಚಾರ್ಯ, ಜಗದೀಶ್ ಶೆಟ್ಟಿ, ಸುಬ್ರಾಯ ಪುಣಚ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net