

ಮಸ್ಕಿ: ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಯೋಜನೆಯಿಂದ ಜಗತ್ತಿನಲ್ಲಿ ಭಾರತ ಆರ್ಥಿಕವಾಗಿ ಸದೃಢವಾಗುತ್ತಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಇದನ್ನೂ ಓದಿ:ದೇಶಕ್ಕೆ ಪಂಡಿತ ದೀನದಯಾಳ್ ಕೊಡುಗೆ ಅಪಾರ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಂ.ದೀನದಯಾಳ್ ಉಪಾಧ್ಯಾಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಆತ್ಮನಿರ್ಭರದಿಂದ ಕೌಶಲ ಪೂರ್ಣ ಉದ್ದಿಮೆ ಸ್ಥಾಪಿಸಿ ಭಾರತ ಸದೃಢವಾಗುವಂತೆ ಮಾಡಿದ್ದಾರೆ. ಜಿಎಸ್‌ಟಿ ಹೊರೆ ತಗ್ಗಿಸಿ ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಅನುಕೂಲ ಮಾಡಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ ಮಾತನಾಡಿ, ಪಂ.ದೀನದಯಾಳ್ ಉಪಾಧ್ಯಾಯ ಅವರ ದೂರದೃಷ್ಟಿಯಿಂದ ಬಿಜೆಪಿ ಜಗತ್ತಿನಲ್ಲಿ ಪ್ರಮುಖ ಪಕ್ಷವಾಗಿದ್ದು, ಅವರ ತ್ಯಾಗ ಬಲಿದಾನ ಆದರ್ಶವಾಗಿದೆ ಎಂದರು.
ಪ್ರಮುಖರಾದ ಬಸವಂತರಾಯ ಕುರಿ, ಮಲ್ಲಪ್ಪ ಅಂಕುಶದೊಡ್ಡಿ, ಸಿದ್ದಣ್ಣ ಹೂವಿನಬಾವಿ, ಡಾ.ಬಿ.ಎಚ್.ದಿವಟರ್, ಪಂಪಾಪತೆಪ್ಪ ಸಾಹುಕಾರ ತಿಡಿಗೋಳ, ಸಂತೋಷ ರಾಜಗುರು, ಶಿವಕುಮಾರ ಪಾಟೀಲ್, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಪ್ರಸನ್ನ ಪಾಟೀಲ್, ರಮೇಶ ಉದ್ಬಾಳ, ಬಸವರಾಜ ಗುಡಿಹಾಳ, ಮೌನೇಶ ನಾಯಕ, ನಾಗರಾಜ ಯಂಬಲದ, ಚೇತನ್ ಪಾಟೀಲ್ ಇತರರಿದ್ದರು.