

ಬೈಲಹೊಂಗಲ, ಬೆಳಗಾವಿ: ಪಂಡಿತ್ ದೀನದಯಾಳ್ ಉಪಾಧ್ಯಾಯರು ಆದರ್ಶ ವ್ಯಕ್ತಿಯಾಗಿ, ಪ್ರಚಂಡ ಸಂಘಟನಾ ಸಾಮರ್ಥ್ಯ ಹೊಂದಿದ್ದರು ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹೇಳಿದರು. ಬಿಜೆಪಿ ಮಂಡಲ ವತಿಯಿಂದ ಪಟ್ಟಣದ ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ದೀನದಯಾಳ್ ಜಯಂತಿ, ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ನಿಮಿತ್ತ ಸೇವಾಪಾಕ್ಷಿಕ ಅಭಿಯಾನದ ಅಡಿಯಲ್ಲಿ ಊರಿಗೊಂದು ಅರಳಿ ಮರ ಕಾರ್ಯಕ್ರಮ, ರಕ್ತದಾನಿಗಳಿಗೆ ಪ್ರಮಾಣ ಪತ್ರ, ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ, ಮನ್ ಕಿ ಬಾತ್, ಪಕ್ಷದ ಹಿತೈಷಿಗಳ ಮನೆಗಳಿಗೆ ಧ್ವಜ ಕಟ್ಟುವ ಹಾಗೂ ಸಹಭೋಜನ ಕಾರ್ಯಕ್ರಮ ಭಾನುವಾರ ಅವರು ಮಾತನಾಡಿದರು. ದೀನದಯಾಳ್ ಅವರು ಹಳ್ಳಿಗಳ ಉದ್ಧಾರಕ್ಕೆ ಮಾರ್ಗಸೂಚಕರಾಗಿ ಸಮಾಜ ಸಮನ್ವಯತೆಗೆ ದಾರಿ ತೋರಿದ ಮಹಾನ್ ವ್ಯಕ್ತಿಯಾಗಿದ್ದು, ಅವರ ಆದರ್ಶ ಪ್ರೇರಣೆಯಾಗಿದೆ ಎಂದರು.
ಪ್ರೊ. ಸಿ.ವಿ ಜ್ಯೋತಿ, ಒಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗುರು ಮೆಟಗುಡ್ಡ, ಮಂಡಲ ಉಪಾಧ್ಯಕ್ಷ ಸುಭಾಷ ತುರಮರಿ, ಪ್ರ. ಕಾರ್ಯದರ್ಶಿ ಲಕ್ಕಪ್ಪ ಕಾರಗಿ, ಸುನಿಲ ಮರಕುಂಬಿ, ಸಂತೋಷ ಹಡಪದ, ಸುರೇಶ ವಾರಿ, ನಾಮದೇವ ಸಿಂಗನ್ನವರ, ಸಿಜಿ ವಿಭೂತಿಮಠ, ಚನ್ನಪ್ಪ ಹೊಸೂರ, ಚನ್ನಮ್ಮ ಯಡಳ್ಳಿ, ಆಶಾ ಕಸಮಳಗಿ, ಶ್ವೇತಾ ಕೊರಿಕೊಪ್ಪ, ಅಶ್ವಿನಿ ಮಾರಿಹಾಳ, ಮಂಜು ಮರಶೆಟ್ಟಿ,ರವಿ ಹೊಸೂರ, ರಾಘು ಕುಮಚಿ, ಶಿವಾನಂದ ಬೆಳಗಾವಿ, ಗುರುಪಾದ ಅಂಗಡಿ, ವೀರೇಶ ದೊಡವಾಡ, ವೀರೇಶ ಭೂಷಣನವರ, ಆಕಾಶ ಶಿಂಧೆ, ಶಿವಾನಂದ ಚಿಕಬಸಣ್ಣವರ, ಕುಮಾರ
ಭೋರಕನವರ ಇತರರಿದ್ದರು.