

ಲಕ್ಷ್ಮೇಶ್ವರ: ಯೋಗವನ್ನು ವಿಶ್ವಕ್ಕೆ ಪಸರಿಸಿದ ಹೆಗ್ಗಳಿಕೆ ಭಾರತದ್ದು, 9 ವರ್ಷಗಳಿಂದ ಎಲ್ಲ ದೇಶಗಳಲ್ಲೂ ಯೋಗ ಪ್ರಾರಂಭಿಸಿ ಜೂನ್ 21 ಅನ್ನು ವಿಶ್ವ ಯೋಗ ದಿನವನ್ನಾಗಿ ಆಚರಣೆ ಮಾಡುತ್ತಿರುವುದು ಭಾರತದ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದು ತಾಯಿ ಪಾರ್ವತಿ ಮಕ್ಕಳ ಬಳಗದ ಖಜಾಂಚಿ ಜಯಲಕ್ಷ್ಮೀ ಮಹಾಂತಶೆಟ್ಟರ ಹೇಳಿದರು.
ಬುಧವಾರ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಆವರಣದಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸೇವಾ ಸಂಸ್ಥೆ, ಯೋಗ ಸಾಧಕರ ಸಮಿತಿ, ಜಿಲ್ಲಾ ಆಯುಷ್ ಇಲಾಖೆ, ತಾಯಿ ಪಾರ್ವತಿ ಮಕ್ಕಳ ಬಳಗ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಡಾ. ದೀಪಾ ಬಿಂಕದಕಟ್ಟಿ ಮಾತನಾಡಿ, ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಯೋಗ ಅಳವಡಿಸಿಕೊಂಡು ದೈಹಿಕ, ಮಾನಸಿಕ ಆರೋಗ್ಯದ ಮೂಲಕ ಸುಂದರ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದರು. ಸೇವಾ ಸಂಸ್ಥೆಯ ಅಧ್ಯಕ್ಷ ದಶರಥ ಕೋಟೆಗೌಡ್ರ ಯೋಗದ ವಿವರಣೆ ನೀಡಿದರು.
ಮುಖ್ಯೋಪಾಧ್ಯಾಯ ಜೆ.ಡಿ. ಲಮಾಣಿ, ಶಾರದಾ ಮಹಾಂತಶೆಟ್ಟರ, ಡಾ. ಶರಣಪ್ಪ ಬಿಂಕದಕಟ್ಟಿ, ಡಾ.ಎಸ್.ಎಸ್. ಹೂವಿನ, ಎಂ.ಸಿ. ಹಿರೇಮಠ, ಆರ್.ಎಂ. ಕದಡಿ, ಎಸ್.ಎಫ್. ಕೊಡ್ಲಿ, ಇಂದುಮತಿ ಜಕ್ಕನಗೌಡ್ರ, ನಾಗರಾಜ ಸೂರಣಗಿ, ವೀಣಾ ಹತ್ತಿಕಾಳ, ಪುಷ್ಪಾ ಪೆರಡೂರ, ರೂಪಾ ಸಂತಿ, ಪಾರ್ವತಿ ಕಳ್ಳಿಮಠ, ಶೈಲಾ ಆದಿ, ಪ್ರಭಾವತಿ ಪುರಾಣಿಕಮಠ, ಪ್ರಕಾಶ ಹುಲಬಜಾರ, ಚಂದ್ರಶೇಖರ ಪಾಟೀಲ, ನೀಲಪ್ಪ ತೆಗ್ಗಳ್ಳಿ, ವಿದ್ಯಾ ಗಾಂಜಿ, ಜ್ಯೋತಿ ಸುಣಗಾರ ಇದ್ದರು. ಬಸವರಾಜ ಸಂಗಪ್ಪಶೆಟ್ಟರ ವಂದಿಸಿದರು.