

ಅರಕೇರಾ: ಚಂದ್ರನ ದಕ್ಷಿಣ ಧ್ರುವಕ್ಕೆ ವಿಕ್ರಮ್ ಲ್ಯಾಂಡರ್ ಇಳಿಸಿದ ಏಕೈಕ ರಾಷ್ಟ್ರ ಭಾರತವಾಗಿದ್ದು, ಇಸ್ರೋ ಜಗತ್ತು ನಿಬ್ಬೆರಗಾಗುವ ಸಾಧನೆ ಮಾಡಿದೆ ಎಂದು ಐಸಿಐಸಿಐ ಫೌಂಡೇಷನ್ ಕಮ್ಯುನಿಟಿ ಫೆಸಿಲಿಟೇಟರ್ ವಿಜಯಮಹಾಂತೇಶ ಹಿರೇಮಠ ಹೇಳಿದರು.
ಇದನ್ನೂ ಓದಿ: ಬಾಹ್ಯಾಕಾಶ ಸಂಶೋಧನೆಯಲ್ಲಿ ಇಸ್ರೋ ಮೈಲುಗಲ್ಲು
ಪಟ್ಟಣದ ಗಾಂಧಿ ವೃತ್ತದ ಬಳಿ ಸಂಭ್ರಮಾಚರಣೆಯಲ್ಲಿ ಬುಧವಾರ ರಾತ್ರಿ ಮಾತನಾಡಿದರು. ಇಡೀ ವಿಶ್ವದ ನಿರೀಕ್ಷೆಗೆ ಭಾರತ ಹೆಮ್ಮೆಯ ಉತ್ತರ ನೀಡಿದೆ. ಮಹಾತ್ವಾಕಾಂಕ್ಷಿ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಮುಂದುವರಿದ ರಾಷ್ಟ್ರಗಳು ನಿಬ್ಬೆರಗಾಗಿವೆ.
ಚಂದ್ರನ ಅಂಗಳದಲ್ಲಿ ಉಪಗ್ರಹ ಇಳಿಸಿದ ಅಮೆರಿಕ, ರಷ್ಯಾ, ಚೀನಾ, ನಂತರ ನಾಲ್ಕನೇ ದೇಶ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಮಾನವ ಸಹಿತ ಗಗನಯಾನ ಯೋಜನೆಗೆ ಸಿದ್ಧತೆ ನಡೆದಿದೆ. ಹೊಸ ಕಲ್ಪನೆ, ಆವಿಷ್ಕಾರ ಕೈಗೊಳ್ಳುವ ಇಸ್ರೋ ಕಾರ್ಯ ಶ್ಲಾಘನೀಯವಾಗಿದೆ ಎಂದರು.