ಚಂದ್ರನೊಂದಿಗಿದೆ ಭಾರತಕ್ಕೆ ವಿಶೇಷ ಸಂಬಂಧ, ಇಸ್ರೋ ವಿಜ್ಞಾನಿ ಸುಧೀಂದ್ರ ಬಿಂದಗಿ ಮಾಹಿತಿ

08GDG03- isro
Published on

ಗದಗ: ನನ್ನಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳ ಬಗ್ಗೆ ಸಾಕಷ್ಟು ಕುತೂಹಲಗಳಿದ್ದವು. ನಮ್ಮ ಜನರಿಗೆ ಚಂದ್ರನೊಂದಿಗೆ ವಿಶೇಷ ಸಂಬಂಧವಿದೆ ಎಂದು ಇಸ್ರೋ ವಿಜ್ಞಾನಿ ಸುಧೀಂದ್ರ ಬಿಂದಗಿ ಹೇಳಿದರು.


ಇತ್ತೀಚೆಗೆ ಲಿಂಗಾಯತ ಪ್ರಗತಿಶೀಲ ಸಂಘದ 2657ನೇ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಹ್ಮಾಂಡ ದೊಡ್ಡದಿದೆ. ವಿಜ್ಞಾನಿಗಳಲ್ಲಿ ಅನೇಕ ವಿಷಯಗಳನ್ನು ತಿಳಿಯಬೇಕೆಂಬ ಕುತೂಹಲಗಳಿರುತ್ತವೆ. ಮಂಗಳಯಾನ ಮುಟ್ಟಿದ ಏಕೈಕ ರಾಷ್ಟ್ರ ಭಾರತ. ಚಂದ್ರನ ದಕ್ಷಿಣ ಭಾಗದಲ್ಲಿ ನೀರಿನ ಅಂಶವನ್ನು ಗುರುತಿಸಿ ಆ ಭಾಗಕ್ಕೆ ತಲುಪಿದ ಮೊಟ್ಟಮೊದಲ ದೇಶ ಭಾರತ. ಚಂದ್ರಯಾನ ಪ್ರಯೋಗ ಮಾಡುವಾಗ ಸಫಲತೆ, ವಿಫಲತೆಗಳು ಇದ್ದೆ ಇರುತ್ತವೆ. ಆ ದೋಷಗಳನ್ನು ಚಂದ್ರಯಾನ-3ರಲ್ಲಿ ಸರಿಪಡಿಸಿಕೊಂಡು ಯಶಸ್ವಿಯಾಗಿದ್ದೇವೆ. ಈ ಯಶೋಗಾಥೆಯ ಹಿಂದೆ ವಿಜ್ಞಾನಿಗಳ ಶ್ರಮ ಮತ್ತು ಕಷ್ಟದ ಪರಿಸ್ಥಿತಿಗಳು ಇವೆ ಎಂದು ಸುರೇಂದ್ರ ಬಿಂದಗಿ ಹೇಳಿದರು. ಚಿಕ್ಕಂದಿನಿಂದಲೂ ತೋಂಟದಾರ್ಯ ಮಠದ ಅನ್ನದಾಸೋಹ, ಜ್ಞಾನದಾಸೋಹ, ಪುಸ್ತಕದಾಸೋಹ, ಧಾರ್ವಿುಕ, ಸಾಂಸ್ಕೃತಿಕ ಕಾರ್ಯಗಳನ್ನು ನೋಡುತ್ತ ಬೆಳೆದಿದ್ದೇನೆ ಎಂದು ಹೇಳಿದರು.


ಸಾನ್ನಿಧ್ಯ ವಹಿಸಿದ್ದ ತೋಂಟದ ಸಿದ್ಧರಾಮ ಶ್ರೀಗಳು ಮಾತನಾಡಿ, ನರೇಂದ್ರ ಮೋದಿಯವರು ವಿಜ್ಞಾನ ಮತ್ತು ವಿಜ್ಞಾನಿಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿರುವುದು ಅಭಿನಂದನೀಯ. ಚಂದ್ರಯಾನ-2 ರಲ್ಲಿ ವಿಜ್ಞಾನಿಗಳು ಹತಾಶರಾದಾಗ ಪ್ರಧಾನಮಂತ್ರಿಗಳು ಹುರಿದುಂಬಿಸಿ ಪ್ರೋತ್ಸಾಹಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ ಬಹಳಷ್ಟು ಮುಂದುವರಿದಿರುವ ದೇಶ ಎಂಬುದನ್ನು ವಿಶ್ವಕ್ಕೆ ಸಾರಿದ್ದಾರೆ. ಅನೇಕ ಖನಿಜ ಸಂಪತ್ತುಗಳು ಚಂದ್ರನ ಮೇಲೆ ಇರುವುದನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ ಎಂದರು.

ಎಸ್. ಎಸ್. ಪಾಟೀಲ, ಕಮಲಮ್ಮ ತಾಯಿ, ರಾಮಚಂದ್ರ ಮೋನೆ, ಪ್ರಭಯ್ಯ ವಿರಕ್ತಮಠ, ಶೇಖಣ್ಣ ಕಳಸಾಪೂರ, ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net