

ಕೊಕ್ಕರ್ಣೆ: ಮುದ್ದೂರು ವಿಎಸ್‌ಎಸ್ ಸಿಬಿಎಸ್‌ಇ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಆರ್ಯ ಐಬಿಆರ್ ಸಾಧಕ (ಇಂಡಿಯಾ ಬುಕ್ ಆಫ್ ರೆಕಾರ್ಡ್) ಬಿರುದನ್ನು ಪಡೆದಿದ್ದಾರೆ. ಆರ್ಯ 5 ವರ್ಷ ಮತ್ತು 5 ತಿಂಗಳ ವಯಸ್ಸಿನಲ್ಲಿ 19 ರಾಷ್ಟ್ರೀಯ ಚಿಹ್ನೆ, 8 ಗ್ರಹ, ಏಷ್ಯಾದ 48 ದೇಶ, ಕಾಮನಬಿಲ್ಲಿನ 7 ಬಣ್ಣ, 7 ಖಂಡ, 5 ಸಾಗರ, ವಿಶ್ವದ 7 ಅದ್ಭುತಗಳು, ಕರ್ನಾಟಕದ ಜಿಲ್ಲೆಗಳು, ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಭಾರತದ 14 ಪ್ರಧಾನಮಂತ್ರಿ ಮತ್ತು 15 ರಾಷ್ಟ್ರಪತಿ, 28 ರಾಜ್ಯ ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳನ್ನು ಹೆಸರಿಸುವ ಮೂಲಕ ಈ ಸಾಧನೆ ಮಾಡಿದ್ದಾನೆ. ಈತ ಹೆಂಗವಳ್ಳಿ ಗುರುಮೂರ್ತಿ ಬಿ. ಮತ್ತು ಶ್ಯಾಮಲಾ ದಂಪತಿಯ ಪುತ್ರನಾಗಿದ್ದು, ಪ್ರಸ್ತುತ ಯುಕೆಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.