

ಬೆಂಗಳೂರು: ಕೇವಲ 17 ಸೆಕೆಂಡ್‌ಗಳಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳ ಹೆಸರು ಹೇಳುವ ಮೂಲಕ 5 ವರ್ಷದ ಪುಟ್ಟ ಪೋರಿ ಧ್ವನಿ ಪಿ. ಮಲ್ನಾಡ್ 2024ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರು ದಾಖಲಿಸಿದ್ದಾಳೆ.
ರಾಜಾಜಿನಗರದ ನಿವಾಸಿಗಳಾದ ಪ್ರಮೋದ್- ಶ್ರುತಿ ದಂಪತಿಯ ಮಗಳಾದ ಧ್ವನಿ, ಮಲ್ಲೇಶ್ವರದ ಕ್ಲೂನಿ ಕಾನ್ವೆಂಟ್‌ನಲ್ಲಿ ಯುಕೆಜಿ ವ್ಯಾಸಂಗ ಮಾಡುತ್ತಿದ್ದಾಳೆ. ಬಾಲಕಿಯ ಈ ಸಾಧನೆಗೆ ಕುಟುಂಬ ವರ್ಗ ಹಾಗೂ ಶಾಲೆಯ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಅಪಾರ ಬುದ್ಧಿಮತ್ತೆ ಹಾಗೂ ನೆನಪಿನ ಶಕ್ತಿಯನ್ನು ಹೊಂದಿರುವ ಬಾಲಕಿ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು, ವಿವರ, ದೇಶದ ಪ್ರಮುಖ ಸ್ಮಾರಕಗಳು, ರಾಜ್ಯ, ರಾಜಧಾನಿಗಳ ಹೆಸರು, ಇದುವರೆಗಿನ ಭಾರತದ ಪ್ರಧಾನ ಮಂತ್ರಿಗಳ ಮತ್ತು ರಾಷ್ಟ್ರಪತಿಗಳ ಹೆಸರುಗಳನ್ನು, ಪ್ರಸಿದ್ಧ ಸಾಧಕರ ಹೆಸರುಗಳನ್ನು ಹೇಳುತ್ತಾಳೆ. ಹನುಮಾನ್ ಚಾಲೀ ವನ್ನು ಸುಶ್ರಾವ್ಯವಾಗಿ ಹಾಡುತ್ತಾಳೆ.