ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸಾಧಿಸಿ

Untitled design (18)
ಗುಂಜಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿಯ ಪಠ್ಯದ ಚೆನ್ನಭೈರವಿದೇವಿ ನಾಟಕವನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಬಿಇಒ ಸೋಮಶೇಖರಗೌಡ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕರಾದ ಬಸವರಾಜ, ಅನಿತಾ ಎಸ್., ನಾಗರಾಜ ಇದ್ದರು.
Published on

ಸಿಂಧನೂರು: ಪಠ್ಯದ ಚೆನ್ನಭೈರವಿ ನಾಟಕದಲ್ಲಿ ಅಭಿನಯಿಸುವುದು ಕಷ್ಟವಿದೆ. ಆದರೂ, ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮವಾಗಿ ನಟಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಹೇಳಿದರು.

ಪಠ್ಯದ ಚೆನ್ನಭೈರವಿ ನಾಟಕದಲ್ಲಿ ಅಭಿನಯಿಸುವುದು ಕಷ್ಟ

ಗುಂಜಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳು ನಟಿಸಿರುವ 9ನೇ ತರಗತಿ ಪಠ್ಯದ ಚೆನ್ನಭೈರವಿದೇವಿ ನಾಟಕ ವೀಕ್ಷಿಸಿ ಮಾತನಾಡಿದರು. ನಾಟಕದಿಂದ ಮಕ್ಕಳಲ್ಲಿ ಒಳ್ಳೆಯ ಭಾವನೆಗಳು ಮೂಡಲು ಸಾಧ್ಯವಾಗುತ್ತದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಓದಿನ ಕಡೆ ಲಕ್ಷವಹಿಸಿ, ಫಲಿತಾಂಶದಲ್ಲಿ ಸಾಧಿಸಬೇಕೆಂದು ತಿಳಿಸಿದರು. ಮುಖ್ಯಶಿಕ್ಷಕ ನಾಗಪ್ಪ ಬೇರ‌್ಗಿ, ಸಹಶಿಕ್ಷಕರಾದ ಬಸವರಾಜ, ನಜೀರ್‌ಅಹ್ಮದ್, ಅನಿತಾ ಎಸ್., ಮಧುಶ್ರೀ, ನಾಗರಾಜ, ಮಲ್ಲಿಕಾರ್ಜುನ, ವಿರೂಪಾಕ್ಷಿ, ಎಸ್‌ಡಿಎ ಮಹಾಂತೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net