More

    ಸಿಲಿಕಾನ್ ಸಿಟಿಯಲ್ಲಿ ಕೊಲೆ, ಸುಲಿಗೆ, ಸೈಬರ್ ಕ್ರೈಂ ಅಂಕಿಅಂಶ ಬಿಡುಗಡೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಅದರಲ್ಲಿ ಶೇ.31 ಕೊಲೆ ಪ್ರಕರಣ ಮತ್ತು ಸೈಬರ್ ಕ್ರೈಂ ಹೆಚ್ಚಳವಾಗಿವೆ. 2022ರಲ್ಲಿ 46,187 ಅಪರಾಧ ಪ್ರಕರಣ ವರದಿ ಆಗಿದ್ದರೆ, 2023ರಲ್ಲಿ 68,518 ಪ್ರಕರಣ ದಾಖಲಾಗಿವೆ. ಪ್ರಮುಖವಾಗಿ 2022ರಲ್ಲಿ 173 ಕೊಲೆ ನಡೆದಿದ್ದರೇ 2023ರಲ್ಲಿ 207 ಹತ್ಯೆಗಳು ಹಾಗೂ ರಾಬರಿ, ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗಿವೆ.

    ಇದರಲ್ಲಿ ಲಾಭಕ್ಕಾಗಿ ನಡೆದ ಕೊಲೆಗಳು ಗಣನೀಯವಾಗಿ ಇಳಿಕೆಯಾಗಿವೆ. ತಕ್ಷಣ ಪ್ರಚೋದನೆಗೆ ಒಳಗಾಗಿ, ಅನೈತಿಕ ಸಂಬಂಧ, ಕೌಟುಂಬಿಕ ಕಲಹ, ವೈರತ್ವ, ಹಣಕಾಸು ವ್ಯವಹಾರ ಸಂಬಂಧಕ್ಕೆ ಹತ್ಯೆಗಳು ಹೆಚ್ಚಾಗಿ ನಡೆದಿವೆ. ಇದಲ್ಲದೆ, 2022ರಲ್ಲಿ 478 ರಾಬರಿ ದಾಖಲಾಗಿದ್ದರೆ, 2023ರಲ್ಲಿ 673 ರಾಬರಿ ವರದಿಯಾಗಿದ್ದು, ಈ ಪೈಕಿ 385 (ಶೇ.57) ಮೊಬೈಲ್ ಕಿತ್ತುಕೊಂಡ ಪ್ರಕರಣಗಳೇ ಆಗಿವೆ. ಇನ್ನೂ 2022ರಲ್ಲಿ 10 ಸಾವಿರ ಇದ್ದ ಸೈಬರ್ ಕ್ರೈಂ ಕೇಸ್‌ಗಳು 2023ರಲ್ಲಿ 17,623 ಕೇಸ್ ದಾಖಲಾಗಿರುವುದು ನಗರ ಪೊಲೀಸರು ಬಿಡುಗಡೆ ಮಾಡಿದ ಅಂಕಿಅಂಶದಿಂದ ಬೆಳಕಿಗೆ ಬಂದಿದೆ.

    ಸೈಬರ್ ಕ್ರೈಂ ಹೆಚ್ಚಾಗಲು ಸೈಬರ್ ಟಿಪ್‌ಲೈನ್, ಎನ್‌ಸಿಆರ್‌ಪಿ ಪೋರ್ಟಲ್, 112 ಮುಖಾಂತರ ಬಂದ ದೂರುಗಳನ್ನು ಎ್ಐಆರ್ ಮಾಡಲಾಗುತ್ತಿದೆ. ಜನರಲ್ಲಿ ಸೈಬರ್ ಕ್ರೈಂ ಕುರಿತು ಜಾಗೃತಿ ಮೂಡಿದ್ದು, ಎಲ್ಲ ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕರಿಸುತ್ತಿರುವ ಪರಿಣಾಮ ವರದಿ ಹೆಚ್ಚಾಗುತ್ತಿವೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    2023ನೇ ಸಾಲಿನಲ್ಲಿ 1,189 ಅಪಹರಣ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 981 ಪತ್ತೆ ಆಗಿದ್ದು, 208 ಪ್ರಕರಣಗಳು ಪತ್ತೆಯಾಗಿಲ್ಲ. ಇದರಲ್ಲಿ 342 ಬಾಲಕರು, 780 ಬಾಲಕಿಯರು, 48 ಪುರುಷ, 19 ಮಹಿಳೆಯರು ಸೇರಿದ್ದಾರೆ. 2022ರಲ್ಲಿ 931 ಅಪಹರಣ ಕೇಸ್ ದಾಖಲಾಗಿದ್ದು, 908 ಪ್ರಕರಣ ಪತ್ತೆಯಾಗಿವೆ. ಅದೇ ರೀತಿಯಲ್ಲಿ 2023ರಲ್ಲಿ 6,006 ಕಾಣೆಯಾದವರ ಪ್ರಕರಣ ದಾಖಲಾಗಿವೆ. ಪೊಲೀಸರು 5,026 ಕೇಸ್ ಪತ್ತೆಹಚ್ಚಿದ್ದು, 980 ಮಂದಿ ಪತ್ತೆಯಾಗಿಲ್ಲ. ಇದರಲ್ಲಿ 218 ಬಾಲಕರು, 203 ಬಾಲಕಿಯರು, 2262 ಪುರುಷರು ಮತ್ತು 3,323 ಮಹಿಳೆಯರು ಸೇರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts