

ಬದಿಯಡ್ಕ: ಕಾಸರಗೋಡಿನ ಚಿನ್ಮಯ ವಿದ್ಯಾಲಯದಲ್ಲಿ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿ ಧ್ವಜಾರೋಹಣ ನೆರವೇರಿಸಿದರು.
ಪ್ರಾಂಶುಪಾಲ ಟಿ.ವಿ ಸುಕುಮಾರನ್ ಅವರು ಸಂವಿಧಾನದ ಗೌರವಕ್ಕೆ ಧಕ್ಕೆಯಾಗದಂತೆ ಬದುಕೋಣ ಎಂದು ಕರೆ ನೀಡಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಮುಖ್ಯ ಶಿಕ್ಷಕಿ ಪೂರ್ಣಿಮಾ ಎಸ್.ಆರ್, ಸಿಂಧೂ ಶಶೀಂದ್ರನ್, ಅಕಾಡೆಮಿಕ್ ಸಂಟಕಿ ಶೀನಾ ಕೆ.ಪಿ ಉಪಸ್ಥಿತರಿದ್ದರು ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಅನಿರುದ್ಧ ರಜಿತ್ ಸ್ವಾಗತಿಸಿದರು. ಅಪೇಕ್ಷಾ ಕೆ.ಬಿ. ವಂದಿಸಿದರು. ಅನ್ವಿತಾ ಎಸ್.ರಾವ್ ಕಾರ್ಯಕ್ರಮ ನಿರೂಪಿಸಿದರು.