ಸತ್ಪ್ರಜೆಯಾಗಲು ಬೇಕು ಸಂಸ್ಕೃತಿಯ ಅರಿವು : ಸುರೇಶ ಶೆಟ್ಟಿ ಅನಿಸಿಕೆ

indipendence
ಪುಂಚೋಡಿ ಸಮೀಪದ ಬುಡೋಳಿ ನೇತಾಜಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ಸುರೇಶ ಶೆಟ್ಟಿ ಗುರುವಾರ ಧ್ವಜಾರೋಹಣ ನೆರವೇರಿಸಿದರು.
Published on

ಬಂಟ್ವಾಳ: ಬಾಲ್ಯದಿಂದಲೇ ಮಕ್ಕಳಿಗೆ ದೇಶಭಕ್ತಿ ಜತೆಗೆ ಸಂಸ್ಕೃತಿಯನ್ನು ತಿಳಿಸಿದಾಗ ಸತ್ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ಸುರೇಶ ಶೆಟ್ಟಿ ಹೇಳಿದರು.

ಇಲ್ಲಿನ ಪುಂಚೋಡಿ ಸಮೀಪದ ಬುಡೋಳಿ ನೇತಾಜಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ವನಮಹೋತ್ಸವ ಮತ್ತು ಆಟಿಡೊಂಜಿ ಕಾರ್ಯಕ್ರಮ ನಡೆಯಿತು. ಜಾನಕಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಘಟಕ ಅಧ್ಯಕ್ಷ ದಿನೇಶ್ ಸುವರ್ಣ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮಾಜಿ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ, ನಿವೃತ್ತ ಮುಖ್ಯಶಿಕ್ಷಕ ಶ್ರೀಪತಿ ಭಟ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಭವ್ಯಾ ಸಂತೋಷ್, ಪ್ರಮುಖರಾದ ಮೋಹನ್ ಗೌಡ ಕಲ್ಮಂಜ, ಸಿಲ್ವೆಸ್ಟರ್ ಫರ್ನಾಂಡಿಸ್, ಪ್ರಕಾಶ್ ಕುಮಾರ್ ಜೈನ್, ಕೇಶವ ಪೂಜಾರಿ, ಜಯ ಕುಂದರ್, ಶಶಿಧರ್ ಆಚಾರ್ಯ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಅಂತೋನಿ ಸಿಕ್ವೇರ, ರಾಮಚಂದ್ರ ಶೆಟ್ಟಿಗಾರ್, ಕಾರ್ಯದರ್ಶಿ ರಾಜೇಶ ಶೆಟ್ಟಿ ಸೀತಾಳ, ಸದಸ್ಯರಾದ ಸೆಬೆಸ್ಟಿಯನ್ ಮಿನೇಜಸ್, ರೂಪವಾಣಿ ರಾಜೇಶ್ ಶೆಟ್ಟಿ, ವಿಜಯ್ ಫರ್ನಾಂಡಿಸ್, ಸೇರಲ್ಡ್ ಕ್ರಾಸ್ತ, ಕೆ.ರಮೇಶ್ ನಾಯಕ್ ರಾಯಿ, ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತಿತರರು ಇದ್ದರು. ಟ್ರಸ್ಟಿ ದೇವಪ್ಪ ಕುಲಾಲ್ ಸ್ವಾಗತಿಸಿ, ಮುಖ್ಯಶಿಕ್ಷಕ ದೊಡ್ಡಪ್ಪ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net