ಬಂಟಕಲ್ಲು ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ

blm (3)
Published on

ಕಾರ್ಕಳ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ನಿರಾಮಯ ಆರೋಗ್ಯ ವಿಜ್ಷಾನ ಸಂಸ್ಥೆ ಜಂಟಿಯಾಗಿ ಆ.15ರಂದು 79ನೇ ಸ್ವಾತಂತ್ರೃ ದಿನ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶ್ರೀಸೋದೆ ವಾದಿರಾಜ ಸಮೂಹ ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ರಾಧಾಕೃಷ್ಣ ಎಸ್.ಐತಾಳ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನವದೆಹಲಿಯ ರಾಜ್‌ಪಥ್‌ನಲ್ಲಿ ನಡೆದ 76ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದ ಸಂಸ್ಥೆ ವಿದ್ಯಾರ್ಥಿನಿ ಜೆಇಒ ಅರ್ಪಿತಾ ತಂತ್ರಿ ಕರ್ತವ್ಯ, ಶಿಸ್ತು ಮತ್ತು ದೇಶ ಭಕ್ತಿ ಬಗ್ಗೆ ಮಾತನಾಡಿದರು.

ನಿರಾಮಯ ನರ್ಸಿಂಗ್, ಅಲೈಡ್ ಹೆಲ್ತ್ ಸೈನ್ಸ್ ಸಂಸ್ಥೆ ನಿರ್ದೇಶಕ ಡಾ.ನವೀನ್ ಬಲ್ಲಾಳ್, ಪ್ರಾಂಶುಪಾಲ ರೋಶನಿ ರೊಡ್ರಿಗಸ್, ಶ್ರೀ ಶಿವಶಂಕರ್ ಪೈ, ಇಂಜಿನಿಯರಿಂಗ್ ಕಾಲೇಜು ಡೀನ್‌ಗಳು, ವಿವಿಧ ವಿಭಾಗ ಮುಖ್ಯಸ್ಥರು, ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿಗೆ ದೇಶಭಕ್ತಿ ಗೀತೆ, ವಿದ್ಯಾರ್ಥಿಗಳಿಗೆ ಪೋಸ್ಟರ್ ತಯಾರಿಸುವ ಸ್ಪರ್ಧೆ ಆಯೋಜಿಸಿ ಬಹುಮಾನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net