

ಕೋಟ: ಜೀವನ್ ಮಿತ್ರ ಸೇವಾ ಟ್ರಸ್ಟ್ ಕೋಟ ವತಿಯಿಂದ ಶಿವರಾಮ ಕಾರಂತ್ ಥೀಮ್ ಪಾರ್ಕ್ನಲ್ಲಿರುವ ಕಲ್ಮಾಡಿ ಅಂಗನವಾಡಿಯಲ್ಲಿ ಸ್ವಾತಂತ್ರೃ ದಿನಾಚರಣೆ ನಡೆಯಿತು.
ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಕ್ಕಳಿಗೆ ಸಿಹಿ ತಿಂಡಿ ಹಾಗೂ ಕಿಟ್ಗಳನ್ನು ಹಸ್ತಾಂತರಿಸಿದರು. ವಕೀಲ ಶ್ಯಾಮ್ಸುಂದರ್ ನಾಯರಿ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಹಂದಟ್ಟು, ಚಂದ್ರಶೇಖರ್ ಮೆಂಡನ್, ಜಯಕರ್ನಾಟಕ ಸತೀಶ್ ಪೂಜಾರಿ ಸಾಲಿಗ್ರಾಮ, ಕೋಡಿ ಪಂಚಾಯಿತಿ ಸದಸ್ಯ ಕೃಷ್ಣ ಪೂಜಾರಿ, ಕೋಟ ಗ್ರಾಪಂ ಸದಸ್ಯ ಪ್ರದೀಪ್ ಪಡುಕೆರೆ, ಜೀವನ್ ಮಿತ್ರ ಟ್ರಸ್ಟ್ನ ವಸಂತ್ ಸುವರ್ಣ ಕೋಟ, ಗೋಪಾಲ್ ಕೃಷ್ಣ ಕುಂಬಾಷಿ, ಧನುಷ್ ವಡ್ಡರ್ಸಿ, ಜೀವನ್ ಕದ್ರಿಕಟ್, ಕಿಶೋರ್ ಶೆಟ್ಟಿ ಚಿತ್ರಪಾಡಿ, ಜಗನಾಥ್ ಅಮೀನ್ ಸಾಲಿಗ್ರಾಮ, ಶ್ರೀನಿವಾಸ್ ಅಮೀನ್ ಪಡುಕೆರೆ, ಜಯಲಕ್ಷ್ಮೀ, ಅಂಗನವಾಡಿ ಸಹಾಯಕಿ, ಶೈಲಜಾ ಕೋಟ, ನಾಗೇಂದ್ರ ಪುತ್ರನ್ ಕೋಟ, ನಾಗರಾಜ್ ಪುತ್ರನ್ ಉಪಸ್ಥಿತರಿದ್ದರು.