ಸ್ವಾತಂತ್ರ್ಯ ಎಂದರೆ ಸ್ವೇಚ್ಛೆ ಅಲ್ಲ

brahmavara
ಬ್ರಹ್ಮಾವರ ತಾಲೂಕು ಆಡಳಿತದಿಂದ ಸರಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಜರುಗಿದ ಸ್ವಾತಂತ್ರೊೃೀತ್ಸವದಲ್ಲಿ ಪ್ರಿನ್ಸಿಪಾಲ್ ಡಾ.ರವಿರಾಜ್ ಶೆಟ್ಟಿ ಮಾತನಾಡಿದರು.
Published on

ಬ್ರಹ್ಮಾವರ: ಸ್ವಾತಂತ್ರೃಪೂರ್ವದಲ್ಲಿ ಆದಿವಾಸಿ, ಬುಡಕಟ್ಟು ಜನಾಂಗ, ಸನ್ಯಾಸಿ ಯೋಧರು ಬ್ರಿಟಿಷರ ಮುಂದೆ ಹೋರಾಡಿ ಸ್ವಾತಂತ್ರೃ ದೊರಕಿಸಿದ್ದಾರೆ. ಸ್ವಾತಂತ್ರ್ಯ ಎಂದರೆ ಸ್ವೇಚ್ಛೆ ಅಲ್ಲ ಎನ್ನುವುದನ್ನು ಇಂದಿನ ಜನತೆ ತಿಳಿಯಬೇಕು ಎಂದು ಪ್ರಾಂಶುಪಾಲ ಡಾ.ರವಿರಾಜ್ ಶೆಟ್ಟಿ ಹೇಳಿದರು.

ಬ್ರಹ್ಮಾವರ ತಾಲೂಕು ಆಡಳಿತದಿಂದ ಸರ್ಕಾರಿ ಪಪೂ ಕಾಲೇಜು ಕ್ರೀಡಾಂಗಣದಲ್ಲಿ ಸ್ವಾತಂತ್ರೊತ್ಸವದಲ್ಲಿ ಮಾತನಾಡಿದರು. ತಾಲೂಕು ತಹಸೀಲ್ದಾರ್‌ಶ್ರೀಕಾಂತ್ ಎಸ್.ಹೆಗ್ಡೆ ಧ್ವಜಾರೋಹಣ ನೆರವೇರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಭನಾ ಅಂಜುಮ್, ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ಇಬ್ರಾಹಿಂಪುರ್, ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನಿತ್ಯಾನಂದ ಬಿ.ಆರ್, ಹಂದಾಡಿ ಗ್ರಾಪಂ ಅಧ್ಯಕ್ಷೆ ಶೋಭಾ ಪೂಜಾರಿ, ಪ್ರಾಂಶುಪಾಲ ರವೀಂದ್ರ ಉಪಾಧ್ಯಾಯ, ಮುಖ್ಯ ಶಿಕ್ಷಕಿ ಉಮಾ, ಬಿ.ಆರ್.ಸಿ ಅರ್ಚನಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಭಾಗೀರಥಿ ಆಚಾರ್ಯ ಉಪಸ್ಥಿತರಿದ್ದರು. ಶಿಕ್ಷಕ ಶಶಿಧರ್ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net