ಭಜನೆಯಿಂದ ಧಾರ್ಮಿಕ ಮೌಲ್ಯ ವೃದ್ಧಿ

adapady
Published on

ಶಿರ್ವ: ಭಜನೆಯಿಂದ ಮನೆಗಳಲ್ಲಿ ಧಾರ್ಮಿಕ, ಸಾತ್ವಿಕ ಮೌಲ್ಯಗಳ ಜತೆಗೆ ಸಂಸ್ಕಾರ, ಜ್ಞಾನ ವೃದ್ಧಿಯಾಗುತ್ತದೆ. ಸಾತ್ವಿಕ ಮೌಲ್ಯಭರಿತ ವಾತಾವರಣ ನಿರ್ಮಿಸಿದಾಗ ಊರಿನ ವಾತಾವರಣವೂ ಉತ್ತಮವಾಗುತ್ತದೆ ಎಂದು ಧರ್ಮದರ್ಶಿ ಪುಂಡಲೀಕ ನಾಯಕ್ ಹೇಳಿದರು.

ಶ್ರೀಕ್ಷೇತ್ರ ಪಳ್ಳಿ ಅಡಪಾಡಿ ಶ್ರೀ ಉಮಾಮಹೇಶ್ವರ, ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಭಾನುವಾರ ರಾಜಾಪುರ ಸಾರಸ್ವತ ಸಂಘ ವತಿಯಿಂದ ನಡೆದ 26ನೇ ವರ್ಷದ ಸಾರ್ವಜನಿಕ ಶ್ರೀಶನೈಶ್ವರ ಪೂಜೆಯ ಧಾರ್ಮಿಕ ಅನುಷ್ಠಾನಗಳು ಮತ್ತು ನೂತನ ಶಿವಶಕ್ತಿ ಸಾರಸ್ವತ ಭಜನಾ ಮಂಡಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಕಳ ತಾಲೂಕು ಭಜನಾ ಮಂಡಳಿಗಳ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಶ್ರೀಕಾಂತ್ ಪ್ರಭು ಮಂಗಲ್ದಿ ಮಠ ಪ್ರಸ್ತಾವನೆಗೈದರು. ಕ್ಷೇತ್ರದ ವೈದಿಕರಾದ ಹರಿಪ್ರಸಾದ್ ಭಟ್, ವಿಷ್ಣು ಪ್ರಸಾದ್ ಭಟ್, ಶಿವಪ್ರಸಾದ್ ಭಟ್ ಧಾರ್ಮಿಕ ಅನುಷ್ಠಾನಗಳನ್ನು ನೆರವೇರಿಸಿದರು. ಸಂಘದ ಅಧ್ಯಕ್ಷ ಅರುಣ್ ನಾಯಕ್ ದಂಪತಿ ಪೂಜಾನುಷ್ಠಾನದಲ್ಲಿ ಉಪಸ್ಥಿತರಿದ್ದರು. ಜಯಪ್ರಕಾಶ್ ಪ್ರಭು, ಕಿಶನ್ ಪ್ರಭು ಸಹಿತ ಸಂಘದ ಪದಾಧಿಕಾರಿಗಳು ಇದ್ದರು. ಹರೀಶ್ ನಾಯಕ್ ದಾದಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net