ಕಾರ್ಯಪ್ಪ ಬಡಾವಣೆಗೆ ಹೆಚ್ಚಿನ ನೀರು ಪೂರೈಕೆ

ಕಾರ್ಯಪ್ಪ ಬಡಾವಣೆಗೆ ಹೆಚ್ಚಿನ ನೀರು ಪೂರೈಕೆ
Published on

ಸುಂಟಿಕೊಪ್ಪ: ಕಾರ್ಯಪ್ಪ ಬಡಾವಣೆಗೆ ಹೆಚ್ಚಿನ ಅನುದಾನ ಹಾಗೂ ನೀರಿನ ಪೂರೈಕೆ ಮಾಡುತ್ತಿರುವ ಕುರಿತು ಮಾದಾಪುರ ಗ್ರಾಮ ಸಭೆಯಲ್ಲಿ ಹೆಚ್ಚು ಚರ್ಚೆ ಏರ್ಪಟ್ಟಿತ್ತು.

ಇತ್ತೀಚೆಗೆ ಮಾದಾಪುರ ಸಿದ್ಧಿಬುದ್ಧಿ ವಿನಾಯಕ ದೇವಾಲಯ ಆವರಣದಲ್ಲಿ ಗ್ರಾ.ಪಂ. ಅಧ್ಯಕ್ಷ ಮರುವಂಡ ಜಾಲಿ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಈ ಕುರಿತು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಮಾದಾಪುರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಏರ್ಪಟ್ಟಿದೆ. ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಅಪೂರ್ಣವಾಗಿದೆ. ಕಾರ್ಯಪ್ಪ ಬಡಾವಣೆಗೆ ಹೆಚ್ಚಿನ ನೀರು ಪೂರೈಕೆ ಮಾಡುತ್ತಿರುವುದರಿಂದ ಇತರೆ ವಾರ್ಡ್‌ಗಳಿಗೆ ನೀರಿನ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥ ಕೊಪ್ಪತ್ತಂಡ ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾ.ಪಂ.ಅಧ್ಯಕ್ಷ ಸೋಮಣ್ಣ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು, ಈ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು ಎಂದರು.

2018ರ ಜಲಪ್ರಳಯ ಸಂತ್ರಸ್ಥರಿಗೆ ಜಂಬೂರು ಬಾಣೆ (ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆ)ಯಲ್ಲಿ ಸೂರು ಕಲ್ಪಿಸಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಸಮಸ್ಯೆ ಏರ್ಪಟ್ಟಿದೆ. ಚರಂಡಿ ನೀರು ಸರಾಗವಾಗಿ ಹರಿಯದೆ ದುರ್ವಾಸನೆ ಬೀರುತ್ತಿದೆ ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು. ವಾರ್ಡಿನ ಸಮಸ್ಯೆ ಬಗೆಹರಿಸಲು ಹೆಚ್ಚಿನ ಅನುದಾನ ಕಲ್ಪಿಸುವಂತೆ ಜಿ.ಪಂ.ಗೆ ಲಿಖಿತ ಮಾಹಿತಿ ನೀಡಲಾಗಿದೆ ಎಂದು ಸಭೆಗೆ ಅಧ್ಯಕ್ಷರು ಮಾಹಿತಿ ನೀಡಿದರು.

ಸಭೆಯಲ್ಲಿ ಪಿಡಿಒ ಗೂಳಪ್ಪಕೂತಿನ, ಗ್ರಾ.ಪಂ.ಉಪಾಧ್ಯಕ್ಷ ಸುರೇಶ ಬಾವೆ, ಸದಸ್ಯಕರಾದ ಕೆ.ಸಿ.ಶೀಲಾ, ನಿರೂಪಾ, ಮಾನಸ, ಕೆ.ಎ.ಲತೀಫ್, ಪಿ.ಡಿ.ಅಂತೋಣಿ,(ತಂಗಚ್ಚ), ಮನುಬಿದ್ದಪ್ಪ, ದಮಯಂತಿ, ಗೋಪಿ ಭಾಗೀರಥಿ, ಜ್ಯೋತಿ, ಲೆಕ್ಕಾಧಿಕಾರಿ ಅನಿತಾ, ಸಿಬ್ಬಂದಿ ಸಿ.ಸಿ.ರವೀಂದ್ರ, ಪ್ರೀತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net