ನವ ಆರ್ಥಿಕ ನೀತಿಯಿಂದ ಬಡತನ ಹೆಚ್ಚಳ

conference
ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ಸಿಪಿಎಂ ಕುಂದಾಪುರ ವಲಯ 4ನೇ ಸಮ್ಮೇಳನ ನಡೆಯಿತು.
Published on

ಕುಂದಾಪುರ: ನವ ಉದಾರವಾದಿ ಆರ್ಥಿಕ ನೀತಿಗಳು ಈ ದೇಶದ ಸಾಮಾನ್ಯ ಜನತೆಯನ್ನು ಬಡತನಕ್ಕೆ ತಳ್ಳಿದೆ. ಇದರ ಲಾಭಗಳನ್ನು ದೊಡ್ಡ ಬಂಡವಾಳಗಾರರು ಪಡೆಯುತ್ತಿದ್ದು, ಸಂಪತ್ತಿನ ಅಸಮಾನ ಹಂಚಿಕೆ ತೀವ್ರ ಹೆಚ್ಚಳವಾಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿದರು.

ಕುಂದಾಪುರದ ಹೆಂಚು ಕಾರ್ಮಿಕರ ಭವನದಲ್ಲಿ ಭಾನುವಾರ ಸಿಪಿಎಂ ಕುಂದಾಪುರ ವಲಯ 4ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ದುಡಿಯುತ್ತಿರುವ ಕಾರ್ಮಿಕನ ವೇತನ ಹಾಗೂ ಕಾರ್ಮಿಕರನ್ನು ದುಡಿಸುವ ಮುಖ್ಯಸ್ಥರ ವೇತನ ಅಜಗಜಾಂತರ ವ್ಯತ್ಯಾಸಗಳಿವೆ ಎಂಬ ಅಂಶಗಳನ್ನು ಇತ್ತೀಚಿನ ವರದಿಗಳು ಹೇಳುತ್ತಿವೆ. ಈ ಅಸಮಾನತೆಗಳನ್ನು ಸಿಪಿಎಂ ವಿರೋಧಿಸುತ್ತದೆ. ಅಸಮಾನತೆ ಕೊನೆಗಾಣಿಸುವರೆಗೆ ಸಿಪಿಎಂ ಪಕ್ಷ ನಿರಂತರ ಹೋರಾಟ ನಡೆಸುತ್ತದೆ ಎಂದು ಅವರು ಹೇಳಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುರೇಶ್ ಕಲ್ಲಾಗರ ಮಾತನಾಡಿದರು. ಸಿಪಿಎಂ ಮುಖಂಡ ವಿ. ನರಸಿಂಹ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿ ಎಚ್.ನರಸಿಂಹ ಮೂರು ವರ್ಷಗಳ ಕರಡು ವರದಿ ಮಂಡಿಸಿದರು. ಮುಂದಿನ ಮೂರು ವರ್ಷದ ಅವಧಿಗೆ ತಾಲೂಕು ಸಮಿತಿ ಆಯ್ಕೆ ಮಾಡಲಾಯಿತು. ಕುಂದಾಪುರ ತಾಲೂಕು ಸಮಿತಿಗೆ ಕಾರ್ಯದರ್ಶಿಯಾಗಿ ಚಂದ್ರಶೇಖರ ವಿ. ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net