

ಬೈಂದೂರು: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸೇಫ್‌ಸ್ಟಾರ್ ಸೌಹಾರ್ದ ಸಹಕಾರಿ ಸಂಘ ಬೈಂದೂರು ಶಾಖಾ ವ್ಯಾಪ್ತಿಯ ಮೃತ ಸದಸ್ಯರಾದ ಮೀನಾಕ್ಷಿ, ಬಿನ್ ತಮ್ಮಯ್ಯ ಹಾಗೂ ಅಣ್ಣಪ್ಪಯ್ಯ ಆಚಾರ್ಯ ಪತ್ನಿ ಸುಜಾತಾ ಅವರ ಕುಟುಂಬಸ್ಥರಿಗೆ ಸಂಸ್ಥೆ ಅಧ್ಯಕ್ಷ ಜಿ.ಜಿ.ಶಂಕರ್ ಅವರು ತಲಾ 50,000 ರೂ. ಮರಣೋತ್ತರ ಪರಿಹಾರ ವಿತರಿಸಿದರು. ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಜಿಲ್ಲಾದ್ಯಂತ 17 ಶಾಖೆ ಹೊಂದಿದ್ದು, ಈ ಹಿಂದಿನಿಂದಲೂ ಸಹಕಾರಿ ಕೇವಲ ಲಾಭ ಮಾತ್ರ ನೋಡದೆ ಸೇವೆಯ ನೆಲೆಯಲ್ಲಿ ಸಂಸ್ಥೆಯ ಮೃತ ಸದಸ್ಯ ಕುಟುಂಬದವರಿಗೆ ಪರಿಹಾರ ರೂಪದಲ್ಲಿ ಧನಸಹಾಯದೊಂದಿಗೆ ಸಾಂತ್ವಾನ ನೀಡುವ ಪರಿಪಾಠ ಮುಂದುವರಿಸಿಕೊಂಡು ಬರಲಾಗುತ್ತಿದೆ. ಸಂಸ್ಥೆ ನಿರ್ದೇಶಕ ನಾಗೇಶ ದೇವಾಡಿಗ, ಶಾಖಾ ವ್ಯವಸ್ಥಾಪಕ ಯೋಗೇಶ ವಿ.ನಾಯ್ಕ ಹಾಗೂ ಸಿಬ್ಬಂದಿಗಳಿದ್ದರು.