ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆ

ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆ
Published on

ಹಾಸನ: ನಗರದ ಎಸ್‌ಆರ್‌ಎಸ್ ಪ್ರಜ್ಞಾ ವಿದ್ಯಾಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಎಚ್.ಎಂ.ಮೇದನಿ ರಾಜ್ಯ ಚಿನ್ನದ ಪದಕ, ಪ್ರತಿಷ್ಠಿತ ಸ್ಮರಣಿಕೆ ಹಾಗೂ ಪ್ರಮಾಣಪತ್ರಗಳೊಂದಿಗೆ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದ್ದಾರೆ.

ಮಕ್ಕಳ ವಿಭಾಗದಲ್ಲಿ ಆಧಿತ್ಯ ಹೃದಯ ಶ್ಲೋಕ, ಹನುಮಾನ್ ಚಾಲೀಸಾ, ಆವರ್ತಕ ಕೋಷ್ಟಕದ 118 ಮೂಲವಸ್ತುಗಳು, ಸಂವಿಧಾನದ ವಿಧಿಗಳು, ರಾಷ್ಟ್ರನಾಯಕರ ಹೆಸರು, ಶಾಸ್ತ್ರೀಯ ಭಾಷೆ ಹಾಗೂ ಶಾಸ್ತ್ರೀಯ ನೃತ್ಯಗಳ ಹೆಸರು, ರುಬಿಕ್ ಕ್ಯೂಬ್ ಪರಿಹಾರ, ಪ್ರಪಂಚದ ಏಳು ಅದ್ಭುತಗಳ ಹೆಸರು ಸೇರಿದಂತೆ ಅನೇಕ ವಿಷಯಗಳಲ್ಲಿ ತಮ್ಮ ಅಸಾಧಾರಣ ಜ್ಞಾನ ಹಾಗೂ ಸ್ಮರಣಾಶಕ್ತಿ ಪ್ರದರ್ಶಿಸಿ ದಾಖಲೆ ನಿರ್ಮಿಸಿದ್ದಾರೆ. ಎಚ್.ಎಂ.ಮೇದನಿ ಅವರನ್ನು ಶಾಲೆಯ ಆಡಳಿತ ಮಂಡಳಿ, ಬೋಧಕ ವೃಂದ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net