

ಮೃತರೆಲ್ಲರೂ ಬೈಕ್ ಸವಾರರು | ಬಳ್ಳೂರಗಿ ಬಳಿ ಲಾರಿ, ಶಿವಪುರ ಹತ್ತಿರ ಬಸ್ ಡಿಕ್ಕಿ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಅಫಜಲಪುರ ತಾಲೂಕಿನ ಬಳ್ಳೂರಗಿ ಮತ್ತು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಶಿವಪುರ ಬಳಿ ಗುರುವಾರ ಸಂಜೆ ಸಂಜೆ ಸಂಭವಿಸಿದ ಪ್ರತ್ಯೇಕ ಭೀಕರ ರಸ್ತೆ ಅಪಘಾತದಲ್ಲಿ ನೇಪಾಳದ ಐವರು ಸೇರಿ ೭ ಜನರು ಮೃತಪಟ್ಟಿದ್ದಾರೆ.
ದುಧನಿ-ಅಫಜಲಪುರ ರಸ್ತೆಯಲ್ಲಿರುವ ಬಳ್ಳೂರಗಿ ಹತ್ತಿರ ಬೈಕ್‌ಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ನೇಪಾಳದ ಸುರ್ಕೆತ್ ಜಿಲ್ಲೆಯ ಗುಟು ಮೂಲದ ರೋಷನ್ (೨೮), ಚಂದ್ರಾ ರೋಷನ್ (೨೩), ಸ್ವಸ್ತಿಕಾ (೧೯), ಮಿಲನ್ (೫), ಲಖನ್ (೧.೫ ವರ್ಷ) ಮೃತಪಟ್ಟಿದ್ದಾರೆ. ಈ ಕುಟುಂಬ ಅಫಜಲಪುರ ಬಸವೇಶ್ವರ ವೃತ್ತದಲ್ಲಿ ಫಾಸ್ಟ್ಪುಡ್ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿತ್ತು.
ಇವರೆಲ್ಲರೂ ಮಹಾಷ್ಟçದ ದುಧನಿಯಲ್ಲಿರುವ ಸಹೋದರನ ಆರೋಗ್ಯ ವಿಚಾರಿಸಿಕೊಂಡು ಅಫಜಲಪುರಕ್ಕೆ ವಾಪಸ್ ಆಗುತ್ತಿದ್ದರು. ಬಳ್ಳೂರಗಿ ಮಧ್ಯೆ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಅಫಜಲಪುರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಅಫಜಲಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ವಡಗೇರಾ ತಾಲೂಕಿನ ಶಿವಪುರ ಬಳಿ ಬೈಕ್‌ಗೆ ಬಸ್ ಡಿಕ್ಕಿ ಹೊಡೆದಿದ್ದು, ಸಾಬಣ್ಣ ಶಿವಪುರ (೩೮) ಪುತ್ರ ಮನೋಜ (೭) ಸ್ಥಳದಲ್ಲೇ ಅಸುನೀಗಿದ್ದಾರೆ. ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ವಡಗೇರಾ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
===