ರಿಕ್ಷಾ ಚಾಲಕರ ಕಾರ್ಯ ಅಭಿನಂದನೀಯ : ಸತೀಶ್ ಅಂಚನ್ ಹೇಳಿಕೆ

New Project (21)
Published on

ಮೂಲ್ಕಿ: ಸ್ವಾವಲಂಬಿಯಾಗಿ ಬೆಳೆಯುವುದರ ಜತೆಗೆ ಸಮಾಜದ ಬಗ್ಗೆ ಕಳಕಳಿ ಹೊಂದಿರುವ ರಿಕ್ಷಾ ಚಾಲಕರ ಕಾರ್ಯ ಅಭಿನಂದನೀಯ ಎಂದು ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಹೇಳಿದರು.

ಮೂಲ್ಕಿ ಕಾರ್ನಾಡು ಆಟೋರಿಕ್ಷಾ ಚಾಲಕ ಮಾಲೀಕರ ಸಂಘದ ಬೇಡಿಕೆಗೆ ಅನುಗುಣವಾಗಿ ಎಂಆರ್‌ಪಿಎಲ್ ವತಿಯಿಂದ ಸಾರ್ವಜನಿಕ ಕುಡಿಯುವ ನೀರಿನ ಶೀತಲೀಕರಣ ಯಂತ್ರ ಮಂಜೂರಾಗಿದ್ದು, ಲೋಕಾರ್ಪಣೆಯನ್ನು ಕಾರ್ನಾಡು ಆಟೋರಿಕ್ಷಾ ನಿಲ್ದಾಣದಲ್ಲಿ ನಡೆಸಿ ಮಾತನಾಡಿದರು.

ಎಂಆರ್‌ಪಿಎಲ್ ಅಧಿಕಾರಿ ಸ್ಟೀವನ್ ಪಿಂಟೋ ಶುಭ ಹಾರೈಸಿದರು. ಕಾರ್ನಾಡು ಆಟೋ ಚಾಲಕ ಮಾಲೀಕ ಸಂಘದ ಅಧ್ಯಕ್ಷ ಕಿರಣ್ ಶಿಮಂತೂರು, ಕಾರ್ಯದರ್ಶಿ ಉಮ್ಮರ್, ಮಾಜಿ ಅಧ್ಯಕ್ಷ ಶರೀಫ್ ಕಿಲ್ಪಾಡಿ, ಗೋಪಾಲ್ ಶಿಮಂತೂರು, ದಯಾನಂದ ಕಿಲ್ಪಾಡಿ, ಶಂಕರ್ ಪಡಂಗ, ಹಮೀದ್ ಕಿಲ್ಪಾಡಿ ಮತ್ತಿತರರಿದ್ದರು. ಗೋಪಾಲ್ ಶಿಮಂತೂರು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net