

ಕುಂದಾಪುರ: ಕುಂದಾಪುರ ನಗರದ ಶಾಸ್ತ್ರಿ ಸರ್ಕಲಿನ ರಿಕ್ಷಾ ನಿಲ್ದಾಣಕ್ಕೆ ದಾನಿಗಳು ಹಾಗೂ ಶಾಸಕರ ಅನುದಾನದಿಂದ ಅಳವಡಿಸಲಾಗಿರುವ ಮೇಲ್ಛಾವಣಿಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹಾಗೂ ದಾನಿಗಳಾದ ದಿನೇಶ್ ಶೇರೆಗಾರ್ ಬೆಂಗಳೂರು ಜೊತೆಯಾಗಿ ಶನಿವಾರ ಉದ್ಘಾಟಿಸಿದರು.
ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನ್‌ದಾಸ್ ಶೆಣೈ ಅಧ್ಯಕ್ಷತೆ ವಹಿಸಿ ಶಾಸಕರಿಗೆ ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕುಂದಾಪುರ ಪುರಸಭಾ ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ., ಸದಸ್ಯರಾದ ಶೇಖರ್ ಪೂಜಾರಿ, ಅಶ್ವಿನಿ ಪ್ರದೀಪ್, ಪ್ರಭಾವತಿ ಶೆಟ್ಟಿ, ಶ್ರೀಧರ್ ಶೇರಿಗಾರ್, ಸಂತೋಷ್ ಶೆಟ್ಟಿ, ಪುರಸಭಾ ಇಂಜಿನಿಯರ್ ಗುರುಪ್ರಸಾದ್, ಮೇಘನಾ, ಗಣೇಶ್ ಜನ್ನಾಡಿ ಹಾಗೂ ಪುರಸಭಾ ನಾಮನಿರ್ದೇಶಕ ಸದಸ್ಯರು ವಿವಿಧ ಪಕ್ಷದ ಮುಖಂಡರು, ನಿಲ್ದಾಣದ ಆಟೋ ಚಾಲಕರು ಮತ್ತು ನಾಗರಿಕರು ಉಪಸ್ಥಿತರಿದ್ದರು.