

ನರಸಿಂಹ ನಾಯಕ್ ಬೈಂದೂರು
ಬೈಂದೂರು ತಾಲೂಕು ಘೋಷಣೆ ಬಳಿಕ ಹಲವಾರು ಯೋಜನೆಗಳು ಸಾಕಾರಗೊಂಡಿದ್ದರೂ ಯಡ್ತರಲ್ಲಿ ನಿರ್ಮಿಸಿರುವ ಅಗ್ನಿಶಾಮಕ ಕೇಂದ್ರಕ್ಕೆ ಉದ್ಘಾಟನೆ ಭಾಗ್ಯ ಕೂಡಿಬಂದಿಲ್ಲ. ವಿಳಂಬಕ್ಕೆ ಕಾರಣ ಮಾತ್ರ ತಿಳಿದುಬಂದಿಲ್ಲ.
ಯಡ್ತರೆ ಗ್ರಾಮದಲ್ಲಿ ಮೂರು ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ಜತೆಗೆ ಸಿಬ್ಬಂದಿ ವಸತಿಗೃಹ ನಿರ್ವಾಣವಾಗಬೇಕಿತ್ತು. ಠಾಣೆ ಮಾತ್ರ ನಿರ್ಮಾಣಗೊಂಡಿದ್ದು, ವಸತಿಗೃಹಕ್ಕೆ ಇನ್ನೂ ಕಾಲಕೂಡಿ ಬಂದಿಲ್ಲ. ನೂತನ ಕಟ್ಟಡವನ್ನು ನಾಲ್ಕು ತಿಂಗಳ ಹಿಂದೆಯೇ ಇಲಾಖೆಗೆ ಹಸ್ತಾಂತರಿಸಲಾಗಿದ್ದರೂ ಇನ್ನೂ ಉದ್ಘಾಟನೆಗೊಂಡಿಲ್ಲ.
ಬೈಂದೂರು ತಾಲೂಕು ೋಷಣೆಯಾದ ನಂತರ ಅಗ್ನಿಶಾಮಕ ಠಾಣೆ ಮಂಜೂರಾಗಿತ್ತು. ಅಂದಿನಿಂದ ಅಗ್ನಿಶಾಮಕ ಠಾಣೆ ಲೋಕೋಪಯೋಗಿ ಇಲಾಖೆಯ ಹಳೇ ವಸತಿಗೃಹದಲ್ಲಿ ತಾತ್ಕಲಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ನೂತನ ಕಟ್ಟಡ ಮಂಜೂರಾಗಿತ್ತು. ಅನುದಾನವೂ ಮಂಜೂರಾಗಿ ಸುಸಜ್ಜಿತವಾದ ಕಟ್ಟಡವೂ ತಲೆಎತ್ತಿದೆ. ಆದಷ್ಟು ಬೇಗ ಉದ್ಘಾಟನೆ ಮಾಡಿ ಕಚೇರಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಬೇಕೆಂಬ ಆಗ್ರಹ ಕೇಳಿಬಂದಿದೆ.
ಠಾಣೆಯಲ್ಲಿ ಎರಡು ಜಲವಾಹನ, ಎರಡು ಪೋರ್ಟಬಲ್ ಪಂಪ್, ಒಂದು ಮೋಟರ್ ಸೈಕಲ್, ಒಂದು ಏರ್ ಕಂಪ್ರೆಶರ್, ಜನರೇಟರ್ ಇದ್ದು, ಇದರ ನಿರ್ವಹಣೆ ಸವಾಲಾಗಿದೆ. ಒಂದು ಠಾಣಾಧಿಕಾರಿ ಮತ್ತು ಸಹಾಯಕ ಠಾಣಾಧಿಕಾರಿ, ನಾಲ್ಕು ಪ್ರಮುಖ ಅಗ್ನಿಶಾಮಕರು, ನಾಲ್ಕು ಅಗ್ನಿಶಾಮಕ ಚಾಲಕರು, ಒಂದು ಚಾಲಕ ತಂತ್ರಜ್ಞ, ಹದಿನಾರು ಅಗ್ನಿಶಾಮಕರು ಹಾಗೂ ಎರಡು ದ್ವಿತೀಯ ದರ್ಜೆ ಸಹಾಯಕರು ಸೇರಿ 29 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಸಿಬ್ಬಂದಿ ಸಹಿತ ಎಲ್ಲ ರೀತಿಯ ಅಗತ್ಯ ಪರಿಕರಗಳಿರುವ ಅಗ್ನಿಶಾಮಕ ಠಾಣೆಗೆ ಸ್ಥಳದ ಕೊರತೆ ಎದುರಾಗಿದೆ. ನೂತನ ಕಟ್ಟಡವಿದ್ದರೂ ಉದ್ಘಾಟಿಸಿ, ಠಾಣೆಯನ್ನು ಸ್ಥಳಾಂತರಿಸಲು ಸಂಬಂಧಪಟ್ಟ ಇಲಾಖೆ ಮೀನಮೇಷ ಎಣಿಸುತ್ತಿದೆ.
ಈಗಾಗಲೇ ಮೂರು ಬಾರಿ ಸಂಬಂಧಿಸಿದ ಸಚಿವರನ್ನು ಖುದ್ದಾಗಿ ಭೇಟಿ ವಾಡಿ ವಿಚಾರ ತಿಳಿಸಿದ್ದೇನೆ. ಅವರು ಅನಗತ್ಯ ವಿಳಂಬ ವಾಡುತ್ತಿದ್ದಾರೆ . ಇನ್ನೊಮ್ಮೆ ಅವರ ಗಮನಕ್ಕೆ ತರಲಾಗುವುದು. ಸ್ಪಂದಿಸದಿದ್ದರೆ ಅವರ ಅನುಪಸ್ಥಿಯಲ್ಲಿ ನವರಾತ್ರಿ ಒಳಗೆ ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಿದ್ದೇವೆ. ಗುರುರಾಜ ಗಂಟಿಹೊಳೆ, ಬೈಂದೂರು ಶಾಸಕ ಗೃಹಮಂತ್ರಿ, ವಿಧಾನಪರಿಷತ್ ಸದಸ್ಯರಿಗೆ ಅಗ್ನಿಶಾಮಕ ಠಾಣೆ ಲೋಕಾರ್ಪಣೆಗೆ ಮನವಿ ಪತ್ರ ನೀಡಲಾಗಿದೆ. ಗೃಹಸಚಿವರು ಕೊಲ್ಲೂರಿಗೆ ಬಂದಾಗಲೂ ವಾತನಾಡಿದ್ದೇನೆ. ಆದರೆ ಇನ್ನೂ ಉದ್ಘಾಟನೆ ದಿನಾಂಕ ನೀಡಿಲ್ಲ. ಮುಖ್ಯಮಂತ್ರಿ ಮತ್ತು ಗೃಹಸಚಿವರು ನವರಾತ್ರಿಗೆ ಕೊಲ್ಲೂರಿಗೆ ಬರುವ ವಾಹಿತಿ ದೊರಕಿದ್ದು, ಆ ಸಮಯದಲ್ಲಿ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆ ವಾಡುವ ಯೋಚನೆಯಿದೆ. ಎಸ್.ರಾಜು ಪೂಜಾರಿ, ಜಿಪಂ ಮಾಜಿ ಅಧ್ಯಕ್ಷರು. https://www.vijayavani.net/health-damage-due-to-drug-addiction https://www.vijayavani.net/astavadhana-krishna-mutt