ಸಿಲಿಕಾನ್ ಚೇಂಬರ್ ಉದ್ಘಾಟನೆ

IMG-20250215-WA0066
ಕೊಡಗರಹಳ್ಳಿ ಸಮೀಪದ ಜೋಡಿ ಕೆರೆ ಸಮೀಪದ ಹಿಂದು ರುದ್ರಭೂಮಿಯಲ್ಲಿ ಅಳವಡಿಸಲಾಗಿರುವ ಸಿಲಿಕಾನ್ ಚೇಬರನ್ನು ಗಣ್ಯರು ಉದ್ಘಾಟಿಸಿದರು. ಯತೀಶ್, ರವೀಶ್, ಪಿ.ಹರಿಶ್ಚಂದ್ರ, ಪೈ, ಪಿ.ಕೆ.ಜಗದೀಶ್ ಇತರರು ಇದ್ದರು.
Published on

ಸುಂಟಿಕೊಪ್ಪ: ಕೊಡಗರಹಳ್ಳಿ ಸಮೀಪದ ಜೋಡಿ ಕೆರೆ ಸಮೀಪದ ಹಿಂದು ರುದ್ರಭೂಮಿಯಲ್ಲಿ ಅಳವಡಿಸಲಾಗಿರುವ ನೂತನ ಸಿಲಿಕಾನ್ ಚೇಂಬರನ್ನು ಶನಿವಾರ ಉದ್ಘಾಟಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸೋಮವಾರಪೇಟೆ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ಈ ಸಿಲಿಕಾನ್ ಚೇಂಬರನ್ನು ಅಳವಡಿಸಲಾಗಿದೆ. ಯೋಜನೆಯ ಗುಡ್ಡಹೊಸೂರು ವಲಯದ ಮೇಲ್ವಿಚಾರಕ ಯತೀಶ್ ಮಾತನಾಡಿ, ಸಂಸ್ಥೆ ವತಿಯಿಂದ ಗ್ರಾಮದ ಅಭಿವೃದ್ಧಿ ಜತೆಗೆ ಸಮಾಜಮುಖಿ ಹಾಗೂ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಾರಂಗಿ ಮತ್ತು ಕೊಡಗರಹಳ್ಳಿಯಲ್ಲಿ ಸಿಲಿಕಾನ್ ಚೇಂಬರ್ ಅಳವಡಿಸಲಾಗಿದ್ದು, 7ನೇ ಹೊಸಕೋಟೆ ಮತ್ತು ಕಂಬಿಬಾಣೆ ಕಾರ್ಯಕ್ಷೇತ್ರಗಳಲ್ಲಿ ಬೇಡಿಕೆಯಿದ್ದು, ಇದನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.

ಸಿಲಿಕಾನ್ ಚೇಂಬರ್ ಅಳವಡಿಕೆಯಲ್ಲಿ ಸಾಕಷ್ಟು ಶ್ರಮವಹಿಸಿದ ಯತೀಶ್, ಯೋಜನೆಯ ಸೇವಾಪ್ರತಿನಿಧಿ ಹೇಮಾವತಿ, ಬಾಬು ಪೂಜಾರಿ, ಧನಂಜಯ ಮತ್ತು ಸುಮಿತ್ರಾ ಅವರನ್ನು ಸನ್ಮಾನಿಸಲಾಯಿತು.

ಪಿಡಿಒ ರವೀಶ್, ಕಾಫಿ ಬೆಳೆಗಾರರಾದ ಪಿ.ಹರಿಶ್ಚಂದ್ರ ಪೈ, ಪಿ.ಕೆ.ಜಗದೀಶ್, ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಸುರೇಶ್ ಚಂಗಪ್ಪ, ಗ್ರಾ.ಪಂ. ಕಾರ್ಯದರ್ಶಿ ರೂಬಿ, ಯೋಜನೆಯ ಸದಸ್ಯೆ ಭುವನ ಮತ್ತು ಗ್ರಾ.ಪಂ. ಸದಸ್ಯೆ ಕಲಾಮಣಿ, ಸೇವಾ ಪ್ರತಿನಿಧಿ ಹೇಮಾವತಿ, ಗ್ರಾ.ಪಂ. ಸದಸ್ಯರು, ಆಶಾ ಕಾರ್ಯಕರ್ತೆ ಯರು ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net