22ರಂದು ಸ್ವಯಂಸ್ಫೂರ್ತಿ ಕೌಶಲ ಕೇಂದ್ರ ಉದ್ಘಾಟನೆ

scissors cut the red ribbon
scissors cut the red ribbon
Published on

ಬೈಂದೂರು: ಸಮೃದ್ಧ ಬೈಂದೂರು ಪರಿಕಲ್ಪನೆಯ 300 ಟ್ರೀಸ್ ಯೋಜನೆಯಡಿ ಬೆಂಗಳೂರಿನ ಸ್ವಯಂಸ್ಫೂರ್ತಿ ಫೌಂಡೇಶನ್ ವತಿಯಿಂದ ಕ್ಷೇತ್ರದ 8 ಸರ್ಕಾರಿ ಶಾಲೆ ಹಾಗೂ 2 ಅಂಗನವಾಡಿ ಕೇಂದ್ರದಲ್ಲಿ ಸ್ವಯಂಸ್ಫೂರ್ತಿ ಕೌಶಲ ಕೇಂದ್ರಗಳನ್ನು ಜೂನ್ 22ರಂದು ಶಾಸಕ ಗುರುರಾಜ ಗಂಟಿಹೊಳೆ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಸ್ವಯಂಸ್ಫೂರ್ತಿ ಫೌಂಡೇಶನ್ ಪದಾಧಿಕಾರಿಗಳು, ಶಿಕ್ಷಕರು, ಸ್ಥಳೀಯ ಪ್ರಮುಖರು ಭಾಗವಹಿಸಲಿದ್ದಾರೆ.

ನಾಯ್ಕನಕಟ್ಟೆ, ಕಪ್ಪಾಡಿ ಮುರೂರು, ಅರೇಶಿರೂರು, ಜಡ್ಕಲ್, ಹಯ್ಯಂಗಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ಉಳ್ಳೂರು-11ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರ, ಮುದೂರು ದುಡ್ಡಿನಗುಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರ, ಕೊಡ್ಲಾಡಿ ಕೂಡಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net