ವಿವೇಕ ಪದವಿಪೂರ್ವ ಕಾಲೇಜಿನ ವಿಜ್ಞಾನ ಸಂಘ ವಿಶನ್ ಉದ್ಘಾಟನೆ

viveka
ವಿವೇಕ ಪದವಿಪೂರ್ವ ಕಾಲೇಜಿನ ಈ ಶೈಕ್ಷಣಿಕ ವರ್ಷದ ವಿಜ್ಞಾನ ಸಂಘ ವಿಶನ್ ಕುರಿತು ಎಂ.ಐ.ಟಿ. ಮಣಿಪಾಲ ಅಸೋಸಿಯೇಟ್ ಫಾರ್ ಅಕಾಡೆಮಿಕ್ಸ್ ಡೈರೆಕ್ಟರ್ ಡಾ.ರವಿಪ್ರಕಾಶ್ ವೈ ಮಾತನಾಡಿದರು
Published on

ಕೋಟ: ವಿವೇಕ ಪದವಿಪೂರ್ವ ಕಾಲೇಜಿನ ಈ ಶೈಕ್ಷಣಿಕ ವರ್ಷದ ವಿಜ್ಞಾನ ಸಂಘ ವಿಶನ್ ಉದ್ಘಾಟನಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು. ಉದ್ಘಾಟಕರಾಗಿ ಎಂ.ಐ.ಟಿ.ಮಣಿಪಾಲ ಅಸೋಸಿಯೇಟ್ ಫಾರ್ ಅಕಾಡೆಮಿಕ್ಸ್ ಡೈರೆಕ್ಟರ್ ಡಾ.ರವಿಪ್ರಕಾಶ್ ವೈ ವಿದ್ಯಾರ್ಥಿಗಳಿಗೆ ಪವರ್ ಪಾಯಿಂಟ್ ಪ್ರಸೆಂಟೇಶನ್ ಮೂಲಕ ವಿವರಿಸುತ್ತಾ ವಿಜ್ಞಾನದ ವಿಷಯ ಹೇಗೆ ಅಧ್ಯಯನ ಮಾಡಿ ಅರ್ಥ ಮಾಡಿಕೊಳ್ಳಬೇಕು ಎನ್ನುವುದನ್ನು ತಿಳಿಸಿ, ವಿಜ್ಞಾನದಲ್ಲಿರುವ ಜೀವನ ಮೌಲ್ಯ ವಿವರಿಸಿದರು. ಒಂದು ಸಮಸ್ಯೆಗೆ ಹಲವಾರು ಪರಿಹಾರ ಇರುತ್ತವೆ. ಅದರ ಕುರಿತಾಗಿ ಚಿಂತಿಸಬೇಕೇ ಹೊರತು ಯಾವುದೇ ಕಾರಣಕ್ಕೂ ಅಧೀರರಾಗಬಾರದು ಎಂದು ಭೌತಶಾಸ್ತ್ರ ಪ್ರಯೋಗದ ಮೂಲಕ ಪ್ರಸ್ತುತ ಪಡಿಸಿದರು. ಪ್ರಾಂಶುಪಾಲ ಜಗದೀಶ ನಾವಡ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ ಸ್ವಾಗತಿಸಿ, ವಿಜ್ಞಾನ ಸಂಘ ಸಂಯೋಜಕ ರವಿ ಕಾರಂತ್ ವಂದಿಸಿ. ಉಪನ್ಯಾಸಕ ವಾಗೀಶ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net