

ಸುಬ್ರಹ್ಮಣ್ಯ: ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಘಟಕ ವತಿಯಿಂದ ಸುಬ್ರಹ್ಮಣ್ಯ ಗ್ರಾಪಂಗೆ ಒಳಪಟ್ಟ 12 ಬಸ್ ತಂಗುದಾಣಗಳನ್ನು ನವೀಕರಣಗೊಳಿಸುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಪ್ರಥಮ ದಿನ ಅರಂಪಾಡಿ, ಹೊಸೋಳಿಕೆ, ಪರ್ವತಮುಖಿ ಮತ್ತು ಕುಲ್ಕುಂದ ಪ್ರದೇಶದ 4 ಬಸ್ ತಂಗುದಾಣಗಳನ್ನು ಅಂದಗೊಳಿಸಲಾಯಿತು. ಸುಣ್ಣ ಬಣ್ಣ ಬಳಿದು ಶಂಗರಿಸಲಾಯಿತು.
ನವೀಕರಣಗೊಂಡ 4 ಬಸ್ ತಂಗುದಾಣಗಳನ್ನು ಲಯನ್ಸ್ ಪ್ರಾಂತೀಯ ಅಧ್ಯಕ್ಷ ರಂಗಯ್ಯ ಶೆಟ್ಟಿಗಾರ್ ಲೋಕಾರ್ಪಣೆಗೊಳಿಸಿದರು.
ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ವಿಮಲಾ ರಂಗಯ್ಯ, ಪೂರ್ವಾಧ್ಯಕ್ಷ ರಾಮಚಂದ್ರ ಗೌಡ ಪಳಂಗಾಯ, ಕಾರ್ಯದರ್ಶಿ ಗಾಯತ್ರಿ ಕೃಷ್ಣ ಕುಮಾರ್, ನಿಕಟಪೂರ್ವ ಕಾರ್ಯದರ್ಶಿ ಕೃಷ್ಣ ಕುಮಾರ್ ಬಾಳುಗೋಡು, ಕೋಶಾಧಿಕಾರಿ ಭಾರತಿ ದಿನೇಶ್, ಸದಸ್ಯರಾದ ಡಾ.ಶಿವಕುಮಾರ್ ಹೊಸೋಳಿಕೆ, ಪ್ರಕಾಶ್ ಶೆಟ್ಟಿ ಕುಂದಾಪುರ, ದಿನೇಶ್ ಎಂ.ಪಿ., ಪವನ್ ಎಂ.ಡಿ., ಸತೀಶ್ ಕೂಜುಗೋಡು, ಜಗದೀಶ ಪಡ್ಪು, ಮೋಹನದಾಸ ರೈ ಮೊದಲಾದವರಿದ್ದರು.