ಮಂಜೇಶ್ವರ ವಿಜ್ಞಾನ ಮೇಳ ಉದ್ಘಾಟನೆ

New Project (8)
Published on

ಕಾಸರೋಡು: ಮಂಜೇಶ್ವರ ಉಪಜಿಲ್ಲಾ ಶಾಲಾ ವಿಜ್ಞಾನಮೇಳದ ಉದ್ಘಾಟನಾ ಸಮಾರಂಭ ಕೊಡ್ಲಮೊಗರಿನ ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು.

ಹೈಯರ್ ಸೆಕೆಂಡರಿ ಶಾಲೆ ಪ್ರಾಂಶುಪಾಲ ವಿಜಯ ಕುಮಾರ್ ಧ್ವಜಾರೋಹಣಗೈದರು.

ವರ್ಕಾಡಿ ಗ್ರಾಪಂ ಅಧ್ಯಕ್ಷೆ ಭಾರತಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಸದಸ್ಯ ನಾರಾಯಣ ನಾಯ್ಕ, ಕಮಲಾಕ್ಷಿ ಕೆ., ಮಲ್ಲಿಕಾ ಪ್ರಸಾದ್ ಚೌಟ, ವಿದ್ಯಾ ಬಾರಿಕೆ, ವರ್ಕಾಡಿ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕೆ ಮಮತಾ ಶೆಟ್ಟಿ, ವರ್ಕಾಡಿ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ವಿ.ಸಾಮಾನಿ, ಸ್ಥಳೀಯ ವಾರ್ಡ್ ಸದಸ್ಯೆ ಆಶಾಲತಾ, ಪಿಟಿಎ ಅಧ್ಯಕ್ಷ ಅಬ್ದುಲ್ ಮಜಿದ್, ಮುಖ್ಯ ಶಿಕ್ಷಕರ ವೇದಿಕೆ ಕಾರ್ಯದರ್ಶಿ ಶ್ಯಾಮ್ ಭಟ್ ಶ್ರೀ ವಾಣಿವಿಜಯ ಎ.ಯು.ಪಿ. ಶಾಲಾ ಪಿಟಿಎ ಅಧ್ಯಕ್ಷ ಮೊಹಮ್ಮದ್ ರಫೀಕ್ ಶಾಲಾ ಮುಖ್ಯ ಶಿಕ್ಷಕಿ ಕೃಷ್ಣವೇಣಿ ಬಿ., ಶ್ರೀ ವಾಣಿವಿಜಯ ಎಯುಪಿ ಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್, ಪಿಇಸಿ ಕಾರ್ಯದರ್ಶಿ ಪ್ರತಿಭಾ ಮೊದಲಾದವರಿದ್ದರು.

ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ವಿಜಯ ಕುಮಾರ್ ಸ್ವಾಗತಿಸಿದರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಜಾರ್ಜ್ ಕ್ರಾಸ್ತಾ ಪ್ರಸ್ತಾವಿಸಿದರು. ರಾಕೇಶ್ ಆರ್.ಶೆಟ್ಟಿ ಮತ್ತು ಸಂಧ್ಯಾ ನಿರೂಪಿಸಿದರು. ಶಿಕ್ಷಕಿ ಆಶಾ ದಿಲೀಪ್ ರೈ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net