ಬಪ್ಪನಾಡು ದೇವಸ್ಥಾನದಲ್ಲಿ ನವ ಚಂಡಿಕಾಯಾಗ

New Project (56)
Published on

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ಜರುಗಿದ ಅಷ್ಟಮಂಗಳ ಪ್ರಶ್ನೆಯಲ್ಲಿ ಸೂಚಿತವಾದ ಪ್ರಾಯಶ್ಚಿತ ಕಾರ್ಯಕ್ರಮಗಳ ಪ್ರಥಮ ಹಂತವಾಗಿ ಶುಕ್ರವಾರ ಸರ್ವಾಪರಾಧ ಖ್ಯಾಪನ ಪೂರ್ವಕ ಕ್ಷಮಾಯಾಚನೆಯೊಂದಿಗೆ ನವ ಚಂಡಿಕಾಯಾಗ ದ್ವಾದಶ ನಾರೀಕೇಳ ಗಣಪತಿ ಯಾಗ ನಡೆಯಿತು.

ಕ್ಷೇತ್ರದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಪ್ರಧಾನ ಪೌರೋಹಿತ್ಯದಲ್ಲಿ ಅತ್ತೂರುಬೈಲು ರಾಘವೇಂದ್ರ ಉಡುಪ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆ ನಡೆದು ದೇವರಿಗೆ ಅಭಿಷೇಕ, ವಿಶೇಷ ಪೂಜೆ, ದ್ವಾದಶ ಮೂರ್ತಿ ಆರಾಧನೆ ಪರಿಷತ್ ಕೃಚ್ಛ್ರಾಚರಣೆ, ಮುಷ್ಠಿ ಕಾಣಿಕೆ ಸಮರ್ಪಣೆ, ದೇವರಿಗೆ ರಜತ ಸಹಿತ ಸುವರ್ಣ ರಜತ ಕಲಶ ಸಮರ್ಪಣೆ, ನವ ಚಂಡಿಕಾಯಾಗ-ದ್ವಾದಶ ನಾಳಿಕೇರ ಗಣಪತಿ ಯಾಗ ಪೂರ್ಣಾಹುತಿ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು.

ವಾದಿರಾಜ ಉಪಾಧ್ಯಾಯ ಕೊಲಕಾಡಿ, ದೇವಳ ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಕಾರ್ಯನಿರ್ವಹಣಾಧಿಕಾರಿ ಶ್ವೇತಾಪಳ್ಳಿ, ಮಾಜಿ ಮೊಕ್ತೇಸರ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಮಾಜಿ ಧಾರ್ಮಿಕ ಪರಿಷತ್ ಸದಸ್ಯ ಪಂಜ ಭಾಸ್ಕರ ಭಟ್, ವಾಸುದೇವ ಭಟ್ ಪಾವಂಜೆ, ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನ ಮೊಕ್ತೇಸರ ಅತುಲ್ ಕುಡ್ವ, ಸುನೀಲ್ ಆಳ್ವ, ರಾಮಚಂದ್ರ ನಾಯ್ಕ ಕೋಲ್ನಾಡುಗುತ್ತು, ವಕೀಲ ಚಂದ್ರಶೇಖರ್, ಸಂತೋಷ್ ಕುಮಾರ್ ಹೆಗ್ಡೆ, ಕಿರಣ್ ಶೆಟ್ಟಿ ಕೋಲ್ನಾಡುಗುತ್ತು, ಮೂಲ್ಕಿ ನಾಕು ಪಟ್ಣ ಮೊಗವೀರ ಸಭಾ ಅಧ್ಯಕ್ಷ ಚಂದ್ರಕಾಂತ ಶ್ರೀಯಾನ್, ಸುಜಿತ್ ಸಾಲ್ಯಾನ್, ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯೆ ದಯಾವತಿ ಅಂಚನ್, ಕಿಶೋರ್ ಸಾಲ್ಯಾನ್ ಬಿರುವೆರ್ ಕುಡ್ಲ, ವಾಮನ್ ಕೋಟ್ಯಾನ್, ವಿದ್ವಾನ್ ನಾಗೇಶ್ ಬಪ್ಪನಾಡು, ಸತೀಶ್ ಭಂಡಾರಿ, ಪುರುಷೋತ್ತಮ ಬಡಗುಹಿತ್ಲು, ಚಂದ್ರಶೇಖರ ಸುವರ್ಣ, ಉದಯ ಕುಮಾರ್ ಶೆಟ್ಟಿ ಅಧಿಧನ್, ಶಿವಶಂಕರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net