ಮಕ್ಕಳನ್ನು ಮನಸ್ಸನ್ನು ಕುಬ್ಜಗೊಳಿಸದೆ ವಿಸ್ತರಿಸುವ ಪ್ರಯತ್ನ: ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಕಾಪಿಕಾಡ್ ಆಶಯ

New Project (60)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಇಂದು ಶಿಕ್ಷಣ ಪಡೆಯುತ್ತಿರುವ ಮಕ್ಕಳು ಮುಂದೆ ಊರು, ದೇಶ ಬೆಳೆಸಬೇಕಾದವರು. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಸವಾನವಾಗಿ ಕಂಡು ಮನಸ್ಸನ್ನು ಕುಬ್ಜಗೊಳಿಸದೆ ವಿಸ್ತರಿಸುವ ಪ್ರಯತ್ನ ಅಗತ್ಯ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಕಾಪಿಕಾಡ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಂಗಳೂರು ದಕ್ಷಿಣ ವಲಯ ಹಾಗೂ ತಲಪಾಡಿ ಕೆ.ಸಿ.ರೋಡು ಫಲಾಹ್ ವಿದ್ಯಾಸಂಸ್ಥೆಗಳ ಸಹಭಾಗಿತ್ವದಲ್ಲಿ ಕೆ.ಸಿ.ರೋಡು ಫಲಾಹ್ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಮಂಗಳೂರು ದಕ್ಷಿಣ ವಲಯ ತಾಲೂಕುಮಟ್ಟದ ಪ್ರತಿಭಾ ಕಾರಂಜಿ-2024 ಉದ್ಘಾಟನಾ ಸವಾರಂಭದಲ್ಲಿ ವಾತನಾಡಿದರು.

ಫಲಾಹ್ ಶಾಲೆಯ ಹಿರಿಯ ಶಿಕ್ಷಕಿಯರಾದ ಲತಾ ಶೆಟ್ಟಿ, ಐರಿನ್ ರೋಡ್ರಿಗಸ್, ಸಾಧನಾ ರಾವ್ ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ಫಲಾಹ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯು.ಬಿ.ಮಹಮ್ಮದ್ ಉದ್ಘಾಟಿಸಿದರು. ತಲಪಾಡಿ ಗ್ರಾಪಂ ಅಧ್ಯಕ್ಷ ಇಸ್ಮಾಯಿಲ್ ಟಿ. ಅಧ್ಯಕ್ಷತೆ ವಹಿಸಿದ್ದರು.

ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್, ಗ್ರಾ.ಪಂ. ಸದಸ್ಯ ರಝಾಯಿದ್, ಉದ್ಯಮಿಗಳಾದ ಮಹಮ್ಮದ್ ಶರೀಫ್ ಬೋಳಾರ್, ಅಬ್ದುಲ್ ಮೋನು ಮೊಯಿದ್ದೀನ್ ಕತಾರ್, ಉದಯ ಕುವಾರ್ ಕೋಟೆಕಾರ್, ಅನುದಾನಿತ ಶಾಲಾ ಪ್ರಾಥಮಿಕ ಶಿಕ್ಷಕರ ಸಂದ ಜಿಲ್ಲಾಧ್ಯಕ್ಷ ಕೆಎಂಕೆ ಮಂಜನಾಡಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯ್ಸ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂದ ಅಧ್ಯಕ್ಷೆ ಜಯವಂತಿ ಸೋನ್ಸ್, ಸಹಶಿಕ್ಷಕರ ಸಂದ ಅಧ್ಯಕ್ಷೆ ಪ್ರಮೀಳಾ, ಕಾರ್ಯದರ್ಶಿ ವಾರ್ಕ್ಸ್ ಮೆಂಡೋನ್ಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಅಧ್ಯಕ್ಷ ಜಗದೀಶ್ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರ ಸಂದ ಅಧ್ಯಕ್ಷ ಶೇಖರ್ ಕಡ್ತಲ, ಮೈಸೂರು ವಿಭಾಗೀಯ ಕಾರ್ಯದರ್ಶಿ ತ್ಯಾಗಂ ಹರೇಕಳ, ಸಿಆರ್‌ಪಿಗಳಾದ ಹರೀಶ್ ಕುವಾರ್, ತಹಸಿನ, ಫಲಾಹ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಕಾರ್ಯದರ್ಶಿ ಎನ್.ಅರಬಿ ಕುಂಞಿ, ಕೋಶಾಧಿಕಾರಿ ಕೆ.ಎಂ.ಮಜಲ್ ಅಬ್ಬಾಸ್, ವಾಜಿ ವ್ಯವಸ್ಥಾಪಕ ಅಹ್ಮದ್ ಬಾವ, ಜತೆ ಕಾರ್ಯದರ್ಶಿ ಟಿ.ಎಂ.ಬಶೀರ್, ಅನುದಾನಿತ ಕನ್ನಡ ವಾಧ್ಯಮ ಶಾಲೆಯ ಮುಖ್ಯಶಿಕ್ಷಕ ಮಹಮ್ಮದ್ ರಫೀಕ್, ಪ್ರೌಢಶಾಲಾ ಮುಖ್ಯಶಿಕ್ಷಕಿ ಗೀತಾಂಜಲಿ, ಮೀಫ್ ಅಧ್ಯಕ್ಷ ಮೂಸಬ್ಬ, ಪಂಚ ಗ್ಯಾರಂಟಿ ಸಮಿತಿಯ ತಾಲೂಕು ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್ ಮೊದಲಾದವರಿದ್ದರು.

ಫಲಾಹ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ರೇವತಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಸುಶ್ಮಾ ಕಿಣಿ ಪ್ರಸ್ತಾವನೆಗೈದರು. ಚಿತ್ರಕಲಾ ಶಿಕ್ಷಕರ ಸಂದ ಜಿಲ್ಲಾ ಕಾರ್ಯದರ್ಶಿ ಬಿ.ಎಂ.ರಫೀಕ್ ತುಂಬೆ ಹಾಗೂ ಶಿಕ್ಷಕಿ ಚಂದ್ರಕಲಾ ನಿರೂಪಿಸಿದರು.

ಶಾಲಾ ಜೀವನದಲ್ಲಿ ಪ್ರತಿಭೆಗಳನ್ನು ತೋರ್ಪಡಿಸಲು ಪ್ರತಿಭಾ ಕಾರ್ಯಕ್ರಮಗಳು ಸಹಕಾರಿ. ಸರ್ಕಾರ ಅವಕಾಶ ಕೊಟ್ಟಾಗ ತಮ್ಮ ಶಾಲೆಯ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ವಿವಿಧ ಸ್ಪರ್ಧೆಗಳಲ್ಲಿ ಜೋಡಿಸಿಕೊಂಡು ಪ್ರೋತ್ಸಾಹ ನೀಡುವ ಕೆಲಸ ಶಿಕ್ಷಕರು ವಾಡಬೇಕು. ಮಮತಾ ಗಟ್ಟಿ, ಅಧ್ಯಕ್ಷರು, ಗೇರು ಅಭಿವೃದ್ಧಿ ನಿಗಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net