

ವಿಜಯವಾಣಿ ಸುದ್ದಿಜಾಲ ಗುರುಪುರ
ಉಳಾಯಿಬೆಟ್ಟು ಕಿರು ಸೇತುವೆಗೆ ಪರ್ಯಾಯವಾಗಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸುವ ಬಗ್ಗೆ ಮಂಗಳವಾರ ಉಳಾಯಿಬೆಟ್ಟಿಗೆ ಆಗಮಿಸಿದ ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್ ಶ್ರೀಕಾಂತ್ ಸ್ಥಳ ಪರಿಶೀಲನೆ ನಡೆಸಿದರು.
ಫಲ್ಗುಣಿ ನದಿ ನೀರು ಬಯಲಿನತ್ತ ಹರಿಯುವ ತೋಡಿಗೆ ನಿರ್ಮಿಸಲಾಗಿರುವ ಕಿರು ಸೇತುವೆ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಭಾರಿ ವಾಹನ ನಿಷೇಧಿಸಲಾಗಿ, ಕವಾನು ಅಳವಡಿಸಲಾಗಿದೆ. ಇದರಿಂದ ಉಳಾಯಿಬೆಟ್ಟು, ಪೆರ್ಮಂಕಿ, ಮಲ್ಲೂರು, ಬೆಂಜನಪದವು, ಅಡ್ಯಾರು, ಬಿ.ಸಿ.ರೋಡ್‌ಗೆ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಈ ಭಾಗದ ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು, ಮಹಿಳೆಯರ ಸಹಿತ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಈ ನಿಟ್ಟಿನಲ್ಲಿ ಕಿರು ಸೇತುವೆಯ ಪಕ್ಕದಲ್ಲಿ ಮಳೆಗಾಲದವರೆಗೆ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಲು ಸ್ಥಳೀಯರು ಆಗ್ರಹಿಸಿದ್ದರು.
ತಾತ್ಕಾಲಿಕ ರಸ್ತೆ ನಿರ್ಮಿಸದೆ ಹೋದಲ್ಲಿ ನ.13ರಂದು ಉಳಾಯಿಬೆಟ್ಟು ಸಂಪರ್ಕದ ಪರಾರಿಯಲ್ಲಿ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸುವುದಾಗಿ ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆ ಸೋಮವಾರ ಉಳಾಯಿಬೆಟ್ಟು ಪಂಚಾಯಿತಿ ಅಧ್ಯಕ್ಷ ಹರಿಕೇಶ್ ಶೆಟ್ಟಿ ನೇತೃತ್ವದ ನಿಯೋಗದೊಂದಿಗೆ ಸಹಾಯಕ ಆಯುಕ್ತ ಹರ್ಷವರ್ಧನ ಹಾಗೂ ಮಂಗಳೂರು ತಹಸೀಲ್ದಾರ್ ಪ್ರಶಾಂತ್ ಪಾಟೀಲ್ ವಾತುಕತೆ ನಡೆಸಿ ತಾತ್ಕಾಲಿಕ ರಸ್ತೆ ನಿರ್ಮಿಸುವ ಭರವಸೆ ನೀಡಿದ್ದರು.
ಪಿಡಬ್ಲುೃಡಿ ಸಹಾಯಕ ಶ್ರೀಕಾಂತ್ ಸ್ಥಳ ಪರಿಶೀಲಿಸಿ ವಾಧ್ಯಮದೊಂದಿಗೆ ವಾತನಾಡಿ, ಭಾರಿ ವಾಹನ ನಿಷೇಧಗೊಂಡಿರುವ ಕಿರು ಸೇತುವೆಗೆ ಪರ್ಯಾಯವಾಗಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಲು ಅಭ್ಯಂತರವಿಲ್ಲ. ತೋಡಿಗೆ ಕೊಳವೆ ಅಳವಡಿಸಿ ರಸ್ತೆ ನಿರ್ಮಿಸಬೇಕಾಗುತ್ತದೆ. ರಸ್ತೆ ನಿರ್ವಾಣಕ್ಕೆ ಸ್ಥಳೀಯರು ಜಾಗ ಬಿಟ್ಟು ಕೊಡಲು ಮುಂದೆ ಬಂದಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ವಾತುಕತೆ ನಡೆಸಿ ಕಾಮಗಾರಿ ವೆಚ್ಚ ಮಂಜೂರಾತಿ ಬಗ್ಗೆ ಅಂತಿಮ ತೀರ್ವಾನ ಕೈಗೊಳ್ಳಲಿದ್ದಾರೆ. ಬಹುತೇಕ ಶನಿವಾರದೊಳಗೆ ರಸ್ತೆ ನಿರ್ವಾಣ ಕಾಮಗಾರಿ ಆರಂಭಗೊಳ್ಳಬಹುದು ಎಂದರು.
ಉಳಾಯಿಬೆಟ್ಟು ಗ್ರಾ.ಪಂ. ಅಧ್ಯಕ್ಷ ಹರಿಕೇಶ್ ಶೆಟ್ಟಿ, ಉಪಾಧ್ಯಕ್ಷ ದಿನೇಶ್ ಕುವಾರ್ ಬಜಿಲೊಟ್ಟು, ಸದಸ್ಯ ವಿಶ್ವನಾಥ ಶೆಟ್ಟಿ, ಪಿಡಿಒ ಅನಿತಾ ಕ್ಯಾಥರಿನ್, ಗ್ರಾಮ ಕರಣಿಕ ಮೆಹಬೂಬ್, ಉದ್ಯಮಿ ಶರೀಫ್ ಕಣಿಬೆಟ್ಟು ಉಳಾಯಿಬೆಟ್ಟು ಹಾಗೂ ಸ್ಥಳೀಯ ಪ್ರಮುಖರು ಇದ್ದರು.