ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

h27-lions parivar
Published on

ಹುಬ್ಬಳ್ಳಿ: ಲಯನ್ಸ್ ಕ್ಲಬ್ ಆಫ್ ಹುಬ್ಬಳ್ಳಿ ಪರಿವಾರದ 2023- 24ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ಆಯೋಜಿಸಲಾಗಿತ್ತು.

ನೂತನ ಅಧ್ಯಕ್ಷ ಶ್ರೀಕಾಂತ ಕರಿ, ಕಾರ್ಯದರ್ಶಿ ಸಂತೋಷ ಪಾಟೀಲ, ಖಜಾಂಚಿ ಮೋಹನ ಸುತಾರ ಹಾಗೂ ತಂಡಕ್ಕೆ ಲಯನ್ಸ್ ಪರಿವಾರದ ಮಾಜಿ ಜಿಲ್ಲಾ ಗವರ್ನರ್ ಡಾ. ರವಿ ನಾಡಿಗೇರ ಪ್ರತಿಜ್ಞಾವಿಧಿ ಬೋಧಿಸಿದರು. ಬೆಂಗಳೂರಿನ ಲಕ್ಷ್ಮಿ ಡೈಮಂಡ್ಸ್ ಚೇರ್ಮನ್ ಡಾ. ಚೇತನಕುಮಾರ ಮೆಹತಾ ಕಾರ್ಯಕ್ರಮ ಉದ್ಘಾಟಿಸಿದರು.


ಡಾ. ಚೇತನ ಹೊಸಕಟ್ಟಿ, ಶ್ರದ್ಧಾ ಮೊಮಾಯ, ದಯಾನಂದ ಹಳ್ಯಾಳ ನೂತನ ಸದಸ್ಯತ್ವ ಸ್ವೀಕರಿಸಿದರು. ಪರಿವಾರದ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಪರಿಚಯಿಸಿದರು.

ಅಂತಾರಾಷ್ಟ್ರೀಯ ಕುಬ್ಜರ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಜರ್ಮನಿಗೆ ತೆರಳುತ್ತಿರುವ ಕಲಘಟಗಿ ತಾಲೂಕಿವ ದೇವಪ್ಪ ಮೋರೆ ಅವರಿಗೆ ಕ್ಲಬ್ ವತಿಯಿಂದ 25 ಸಾವಿರ ರೂ. ಆರ್ಥಿಕ ನೆರವಿನ ಚೆಕ್ ನೀಡಲಾಯಿತು.


ಲಯನ್ಸ್ ನಿರ್ದೇಶಕ ಚನ್ನವೀರ ಮುಂಗುರವಾಡಿ, ರೆಹನಾ ಖೋತವಾಲ, ಮಹಾವೀರ ಕುಂದೂರ, ವೆಂಕಟೇಶ ಡೊಂಗರೇಕರ, ಸಂಜಯ ಗಣೇಶಕರ, ಅಶೋಕ ಗೋಯಲ್, ನಿವೇದಿತಾ ಕುಲಕರ್ಣಿ, ಕ್ಯಾಪ್ಟನ್ ಮೋಹನ ಕುಲಕರ್ಣಿ, ಅಶೋಕ ಟೆಂಗಿನಕಾಯಿ, ಹೇಮಂತ ಮೋಡಿ, ಬೀರಬಲ್ ಬಿಷ್ಣೋಯಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net