ಕುಪ್ಪೆಪದವು ಬಸ್ ತಂಗುದಾಣ ಉದ್ಘಾಟನೆ

New Project (23)
Published on

ಗುರುಪುರ: ಕುಪ್ಪೆಪದವಿನ ಅರಮನೆ ಸರ್ಕಾರಿ ಪ್ರೌಢಶಾಲೆ ಮತ್ತು ಅನಂತಪಾರ್ಶ್ವ ಜೈನ್ ಮಿಲನ್ ಸಹಭಾಗಿತ್ವದಲ್ಲಿ ಕುಪ್ಪೆಪದವು ಗ್ರಾಪಂ ಬಳಿ ಇಲ್ಲಿನ ವಿದ್ಯಾವರ್ಧಕ ಸಂಘ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಕೊಡುಗೆಯಾಗಿ ನೀಡಿರುವ ನೂತನ ಬಸ್ ತಂಗುದಾಣವನ್ನು ಭಾನುವಾರ ಉದ್ಯಮಿ ಪುಷ್ಪರಾಜ್ ಜೈನ್ ಉದ್ಘಾಟಿಸಿದರು.

ಅಡ್ವೊಕೇಟ್ ಶ್ವೇತಾ ಜೈನ್ ಮೂಡುಬಿದಿರೆ, ಅನಂತಪಾರ್ಶ್ವ ಜೈನ್ ಮಿಲನ್ ಅಧ್ಯಕ್ಷೆ ಸ್ವರ್ಣಲತಾ ಜೈನ್, ಭೋಜರಾಜ ಜೈನ್, ಸುದರ್ಶನ ಜೈನ್, ಸುಭಾಶ್ಚಂದ್ರ ಜೈನ್, ಡಾ.ಸುದೀಪ್ ಕುಮಾರ್ ಸಿದ್ಧಕಟ್ಟೆ, ಜಯರಾಜ ಕಂಬಳಿ, ಪ್ರವೀಣ್ ಕುಮಾರ್ ಅಗರಿ, ಉದಯ ಕುಮಾರ್ ಕಂಬಳಿ, ಅಕ್ಷಯ್ ಕುಮಾರ್, ಪದ್ಮಪ್ರಸಾದ್, ಕುಪ್ಪೆಪದವು ಗ್ರಾಪಂ ಉಪಾಧ್ಯಕ್ಷ ಮಹಮ್ಮದ್ ಶರೀಫ್, ರಫೀಕ್ ಆಚಾರಿಜೋರ ಮತ್ತಿತರರು ಇದ್ದರು. ಜೈನ್ ಮಿಲನ್ ಕುಪ್ಪೆಪದವು ಕಾರ್ಯದರ್ಶಿ ಹರ್ಷಲತಾ ಜೈನ್ ಸ್ವಾಗತಿಸಿದರು. ಕಿಲೆಂಜಾರು ಅರಮನೆ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶೇಖ್ ಅಬ್ದುಲ್ಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net