ಗ್ರಂಥಪಾಲಕರಿಗೆ ವಿಮಾ ರಕ್ಷಣೆ : ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭರವಸೆ

New Project (18)
Published on

ಕಾಸರಗೋಡು: ಗ್ರಂಥಾಲಯ ಸಂಘದೊಂದಿಗೆ ಸಂಯೋಜಿತವಾಗಿರುವ ಗ್ರಂಥಾಲಯಗಳ ಕಾರ್ಯದರ್ಶಿಗಳು ಮತ್ತು ಗ್ರಂಥಪಾಲಕರಿಗೆ ವಿಮಾ ರಕ್ಷಣೆ ಖಚಿತಪಡಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

ಕಾಸರಗೋಡು ವಿದ್ಯಾನಗರದ ಉದಯಗಿರಿಯಲ್ಲಿ ನಿರ್ಮಿಸಲಾದ ಕೇರಳ ಲೈಬ್ರರಿ ಕೌನ್ಸಿಲ್ ತರಬೇತಿ ಸಂಸ್ಥೆ ಉದ್ಘಾಟಿಸಿ ಮಾತನಾಡಿದರು.

ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯಭಾಷಣ ಮಾಡಿದರು. ಗ್ರಂಥಲೋಕದ ಪ್ರಧಾನ ಸಂಪಾದಕ ರಾಜ್ಯ ಕಾರ್ಯಕಾರಿಣಿ ಸದಸ್ಯ ಪಿ.ವಿ.ಕೆ.ಪನಯಾಲ್ ಪ್ರಾಸ್ತಾವಿಕ ಮಾತನಾಡಿದರು. ಕಾಸರಗೋಡು ಜಿಲ್ಲಾ ಗ್ರಂಥಾಲಯ ಪರಿಷತ್ ಅಧ್ಯಕ್ಷ ಕೆ.ವಿ.ಕುಞಿರಾಮನ್ ವರದಿ ಮಂಡಿಸಿದರು. ಶಾಸಕರಾದ ಸಿ.ಎಚ್.ಕುಞಂಬು, ಎಂ.ರಾಜಗೋಪಾಲನ್, ಎ.ಕೆ.ಎಂ.ಅಶ್ರಫ್, ರಾಜ್ಯ ಗ್ರಂಥಾಲಯ ಪರಿಷತ್ತಿನ ಉಪಾಧ್ಯಕ್ಷ ಎ.ಪಿ.ವಿಜಯನ್, ಜತೆ ಕಾರ್ಯದರ್ಶಿ ಮನಾಯತ್ ಚಂದ್ರನ್ ಭಾಗವಹಿಸಿದ್ದರು.

ಕೇರಳ ಸ್ಟೇಟ್ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ವಿ.ಕೆ.ಮಧು ಸ್ವಾಗತಿಸಿ. ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಪಿ.ಪ್ರಭಾಕರನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net