ಕುಂಜತ್ತೂರು ಮದ್ರಸ ಧಾರ್ಮಿಕ ಕಾರ್ಯಕ್ಕೆ ಚಾಲನೆ

Published on

ಮಂಜೇಶ್ವರ: ಕುಂಜತ್ತೂರು ಜುಮಾ ಮಸೀದಿಯ ಅಧೀನದ ಮಹದನುಲ್ ಉಲೂಂ ಮದ್ರಸದ ಸುವರ್ಣ ಮಹೋತ್ಸವದ ಪ್ರಯುಕ್ತ ನಾಲ್ಕು ದಿನಗಳ ಧಾರ್ಮಿಕ ಕಾರ್ಯಕ್ರಮಕ್ಕೆ ಬುಧವಾರ ಮಸೀದಿ ಅಧ್ಯಕ್ಷ ಸಯ್ಯದ್ ಚಕ್ಕೂರ್ ಧ್ವಜಾರೋಹಣಗೈದು ಚಾಲನೆ ನೀಡಿದರು.

ಜಮಾಹತ್ ಖತೀಬ್ ಉಸ್ತಾದ್ ಹಾಶಿರ್ ಹಾಮಿದಿ ಪ್ರಾರ್ಥಿಸಿದರು. ಜಮಾತ್ ಕಾರ್ಯದರ್ಶಿ ಎಸ್.ಕೆ.ಹನೀಫ್, ಕೋಶಾಧಿಕಾರಿ ಕೆ.ಕೆ.ಬಾವ, ಸದಸ್ಯರಾದ ಆಲಿಕುಟ್ಟಿ, ಕುಂಞ್ಞೆ ಮೋನು, ಹಂಝ, ಕುಂಞ್ಞೆ ಅಹ್ಮದ್ ಹಾಜಿ, ಸ್ವಾಗತ ಸಮಿತಿ ಅಧ್ಯಕ್ಷ ಉಸ್ಮಾನ್ ಕುಂಜತ್ತೂರು, ಉಪಾಧ್ಯಕ್ಷ ಅದ್ದು ಹಾಜಿ, ರಿಯಾಜ್, ಕನ್ವೀನರ್ ಶಫೀಕ್ ಹಾಗೂ ಇತರ ಸದಸ್ಯರು, ಸದರ್ ಮುಅಲ್ಲಿಂ ಸಿದ್ದೀಕ್ ಅಜ್ಹರಿ ಹಾಗೂ ಇತರ ಶಿಕ್ಷಕರು ಇದ್ದರು.

ಬುಧವಾರ ಸಂಜೆ ಸಭಾ ಕಾರ್ಯಕ್ರಮ ಕುಂಜತ್ತೂರು ಖಾಝಿ ಉಸ್ತಾದ್ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net