ಮುಳಿಯಾರಿನಲ್ಲಿ ಹಸಿರು ಅಂಗಳ ಉದ್ಘಾಟನೆ

New Project (10)
Published on

ಕಾಸರಗೋಡು: ತ್ಯಾಜ್ಯಮುಕ್ತ ನವಕೇರಳಂ ಅಂಗವಾಗಿ ಕೇರಳ ಎನ್‌ಜಿಒ ಯೂನಿಯನ್ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮುಳಿಯಾರ್ ಸಿಎಚ್‌ಸಿಯಲ್ಲಿ ಸ್ಥಾಪಿಸಲಾದ ಹಸಿರು ಅಂಗಳವನ್ನು ಶಾಸಕ ಸಿ.ಎಚ್.ಕುಞಂಬು ಇತ್ತೀಚೆಗೆ ಉದ್ಘಾಟಿಸಿದರು.

ಒಕ್ಕೂಟದ ಜಿಲ್ಲಾಧ್ಯಕ್ಷೆ ವಿ.ಶೋಭಾ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಎಂ.ವಿ.ಶಶಿಧರನ್, ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ, ಮುಳಿಯಾರ್ ಗ್ರಾಪಂ ಅಧ್ಯಕ್ಷೆ ಮಿನಿ ಪಿ.ವಿ, ಮುಳಿಯಾರ್ ಸಿ.ಎಚ್.ಸಿ. ವೈದ್ಯಾಧಿಕಾರಿ ಡಾ.ಶಮೀಮಾ ತನ್ವೀರ್ ಹಾಗೂ ಒಕ್ಕೂಟದ ರಾಜ್ಯ ಸಮಿತಿ ಸದಸ್ಯ ಕೆ.ಭಾನುಪ್ರಕಾಶ್ ಉಪಸ್ಥಿತರಿದ್ದರು. ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಟಿ.ದಾಮೋದರನ್ ಸ್ವಾಗತಿಸಿದರು. ಜಿಲ್ಲಾ ಖಜಾಂಚಿ ಎಂ.ಜಿತೇಶ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net