ತಾಲೂಕುಮಟ್ಟದ ಕವನ-ಕಥಾ ಸ್ಪರ್ಧೆ ಫಲಿತಾಂಶ : ಬಂಟ್ವಾಳ 23ನೇ ಸಾಹಿತ್ಯ ಸಮ್ಮೇಳನ ಹಿನ್ನೆಲೆ

New Project (28)
Published on

ಬಂಟ್ವಾಳ: ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾಗಿದ್ದ ಬಂಟ್ವಾಳ ತಾಲೂಕು ಮಟ್ಟದ ಮುಕ್ತ ಕಥಾ ಸ್ಪರ್ಧೆ ಮತ್ತು ಕವನ ಸ್ಪರ್ಧೆಯ ಫಲಿತಾಂಶ ಭಾನುವಾರ ಪ್ರಕಟಿಸಲಾಯಿತು.

ಫಲಿತಾಂಶ ಪತ್ರವನ್ನು ಬಂಟ್ವಾಳ ಕಸಾಪ ಕೋಶಾಧಿಕಾರಿ ಡಿ.ಬಿ.ರಹಿಮಾನ್ ಅನಾವರಣಗೊಳಿಸಿ ಮಾತನಾಡಿದರು. ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಸ್ಮರಣ ಸಂಚಿಕೆಯ ಸಮಿತಿಯ ಸಂಚಾಲಕ ಹಮೀದ್ ಡಿ. ವಾಚಿಸಿದರು. ಕಥಾ ಸ್ಪರ್ಧೆಯಲ್ಲಿ ಸುಲ್ತಾನ್ ಮನ್ಸೂರ್ ಕುಕ್ಕಾಜೆ ಪ್ರಥಮ, ಚೇತನ್ ಮುಂಡಾಜೆ ದ್ವಿತೀಯ, ಹಸೀನ ಮಲ್ನಾಡ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕವನ ಸ್ಪರ್ಧೆಯಲ್ಲಿ ಹಸೀನ ಮಲ್ನಾಡ್ ಪ್ರಥಮ, ಸಂತೋಷ್ ಆಚಾರ್ಯ ಕುರಿಯಾಳ ದ್ವಿತೀಯ, ತುಳಸಿ ಕೈರಂಗಳ ತೃತೀಯ ಸ್ಥಾನ ಗೆದ್ದಿದ್ದಾರೆ.

ಸಾಹಿತ್ಯ ಸಮ್ಮೇಳನದ ದಿನ ಪ್ರಶಸ್ತಿ ವಿತರಿಸಲಾಗುವುದು. ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಸುಮಾರು ಐವತ್ತು ಪದಾಧಿಕಾರಿಗಳು ಹಾಗೂ ಸ್ವಾಗತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸವಿತಾ ಶುಭ ಹಾರೈಸಿದರು. ಮುಖ್ಯಶಿಕ್ಷಕಿ ಸುಶೀಲ ವಿಟ್ಲ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ರಾಮ್‌ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ಕೋಶಾಧಿಕಾರಿ ಹಾಜಿ ಸುಲೈಮಾನ್ ಸುರಿಬೈಲು ವಂದಿಸಿದರು. ಬಂಟ್ವಾಳ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net