ಹಳ್ಳಿಗಾಡಿನಲ್ಲೂ ಉತ್ಕೃಷ್ಟ ಶಿಕ್ಷಣ ಸೇವೆ ಎಕ್ಸೆಲ್ ಗುರಿ : ಸುಮಂತ್ ಕುಮಾರ್ ಜೈನ್ ಬಿ. ಮಾಹಿತಿ

New Project (3)
Published on

ಬೆಳ್ತಂಗಡಿ: ಶಿಕ್ಷಣ ಕ್ಷೇತ್ರದಲ್ಲಿ ದುಡಿಯುವ ಕನಸು ಎಳವೆಯಲ್ಲೇ ತನಗಿತ್ತು. ಮೂಲತಃ ಹಳ್ಳಿಗಾಡಿನವನಾಗಿ ಕನ್ನಡ ಕಲಿತ ತನಗೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯ ಶಿಕ್ಷಣ ಸುಲಭವಾಗಿ ದೊರೆಯುವಂತೆ ಮಾಡುವ ಹಂಬಲವಿತ್ತು. ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ಮೂಲಕ ಅದು ಸಾಕಾರಗೊಂಡಿದೆ ಎಂದು ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ಹೇಳಿದರು.

ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ವಿದ್ಯೋದಯ ಕ್ಯಾಂಪಸ್‌ನಲ್ಲಿ ನಡೆದ ವಿದ್ಯಾರ್ಥಿ ಪರಿಷತ್ ಮತ್ತು ಶೈಕ್ಷಣಿಕ ಸಂಘ ಗಳ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು.

ಬೆಳ್ತಂಗಡಿ ಜೂನಿಯರ್ ಕಾಲೇಜು ಪ್ರಾಚಾರ್ಯ ಸುಕುಮಾರ್ ಜೈನ್, ವಿದ್ಯೋದಯ ಸಂಸ್ಥೆ ಅಧ್ಯಕ್ಷ ಕೆ.ಶಿವರಾಮ ಹೆಗ್ಡೆ, ಸಂಚಾಲಕಿ ಶೀಲಾ ಎಸ್.ಹೆಗ್ಡೆ ಶುಭಹಾರೈಸಿದರು. ವಿಜಯವಾಣಿ ಸಮೂಹ ಸಂಸ್ಥೆಯ 2025ನೇ ಸಾಲಿನ ‘ವಿಜಯ ರತ್ನ’ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್ ಬಿ. ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಕಲಾವಿದ ಸದಾಶಿವ ಕುಲಾಲ್, ಎಕ್ಸೆಲ್ ಸಂಸ್ಥೆಯ ಶಿಕ್ಷಣ ಸಂಯೋಜಕಿ ನಿಶಾ ಪೂಜಾರಿ, ಆಡಳಿತ ಮಂಡಳಿ ನಿರ್ದೇಶಕಿ ಸಹನಾ ಜೈನ್, ವಿದ್ಯೋದಯ ಕ್ಯಾಂಪಸ್ ಮೆನೇಜರ್ ಶಾಂತಿರಾಜ್ ಜೈನ್, ಮುಖ್ಯ ಶಿಕ್ಷಕಿ ಸುಜಾತಾ ಬಿ. ಉಪಸ್ಥಿತರಿದ್ದರು. ಶಿಕ್ಷಕಿ ನಮನಾ, ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್ ಸಹಕರಿಸಿದರು. ಕಲಾ ಸಂದ ಸದಸ್ಯರಾದ ದಾಮೋದರ್ ಸ್ವಾಗತಿಸಿದರು. ತೀರ್ಥಪ್ರಸಾದ್ ಸನ್ಮಾನ ಪತ್ರ ಮಾಚಿಸಿದರು. ವಿಜ್ಞಾನ ಸಂದ ನಿರ್ದೇಶಕಿ ಕಾವ್ಯಶ್ರೀ ಎನ್. ನಿರೂಪಿಸಿದರು. ಶ್ವೇತಾ ಕಿರಣ್ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net