ಚಿನ್ಮಯಿ ಆಸ್ಪತ್ರೆ ಲೇಸರ್ ಯಂತ್ರ ಉದ್ಘಾಟನೆ

laser
ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಲೇಸರ್ ಎಂಡ್ ಕಾಸ್ಮೆಟೋಲಜಿ ವಿಭಾಗದಲ್ಲಿ ಅಳವಡಿಸಲಾಗಿರುವ ಹಾಲಿವುಡ್ ಸ್ಪೆಕ್ಟ್ರಾ ಎಂಬ ಅತ್ಯಾಧುನಿಕ ಲೇಸರ್ ಯಂತ್ರ ಉದ್ಘಾಟಿಸಲಾಯಿತು.
Published on

ಕುಂದಾಪುರ: ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಲೇಸರ್ ಆ್ಯಂಡ್ ಕಾಸ್ಮೆಟೋಲಜಿ ವಿಭಾಗದಲ್ಲಿ ಅಳವಡಿಸಲಾಗಿರುವ ಹಾಲಿವುಡ್ ಸ್ಪೆಕ್ಟ್ರಾ ಎಂಬ ಅತ್ಯಾಧುನಿಕ ಲೇಸರ್ ಯಂತ್ರ ಐಎಂಎ ಕುಂದಾಪುರ ಘಟಕ ಅಧ್ಯಕ್ಷೆ ಡಾ.ಪ್ರಮೀಳಾ ನಾಯಕ್ ಉದ್ಘಾಟಿಸಿದರು.

ರೋಟರಿ ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಎ.ಶೆಟ್ಟಿ, ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷೆ ಜ್ಯೂಡಿತ್ ಮೆಂಡೋನ್ಸಾ, ರೆಡ್‌ಕ್ರಾಸ್ ಸೊಸೈಟಿ ಕುಂದಾಪುರದ ಮುತ್ತಯ್ಯ ಶೆಟ್ಟಿ ಶುಭ ಹಾರೈಸಿದರು.

ಚಿನ್ಮಯಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಉಮೇಶ ಪುತ್ರನ್ ಪ್ರಾಸ್ತಾವಿಕವಾಗಿ ಮಾತನಾಡಿ, ತ್ವಚೆ ಆರೈಕೆಯಲ್ಲಿ ಲೇಸರ್ ಚಿಕಿತ್ಸೆ ಪರಿಣಾಮಕಾರಿಯಾಗಿದ್ದು, ಚರ್ಮದ ಸೌಂದರ್ಯ ವರ್ಧನೆಯಲ್ಲಿ ಅನುಕೂಲಕರವಾಗಿದೆ ಎಂದು ನೂತನ ಲೇಸರ್ ಯಂತ್ರದ ಉಪಯುಕ್ತತೆ ವಿವರಿಸಿದರು.

ತಜ್ಞ ವೈದ್ಯರಾದ ಡಾ.ಬಾಲಕೃಷ್ಣ ಶೆಟ್ಟಿ, ಡಾ.ದಿನೇಶ ಶೆಟ್ಟಿ, ಡಾ.ಮೋಹನ ಕಾಮತ್, ಡಾ.ಶ್ರೀದೇವಿ ಕಟ್ಟೆ, ಡಾ.ಶೇಖರ, ಡಾ.ಲಕ್ಷ್ಮೀ ನಾರಾಯಣ್, ಆಸ್ಪತ್ರೆ ಆಡಳಿತ ವರ್ಗದ ರಾಜೇಂದ್ರ ಕಟ್ಟೆ, ಸುಮಾ ಪುತ್ರನ್ ಮತ್ತು ಚಿನ್ಮಯಿ ಪುತ್ರನ್ ಉಪಸ್ಥಿತರಿದ್ದರು. ಡಾ.ಉಮೇಶ ಪುತ್ರನ್ ಸ್ವಾಗತಿಸಿದರು. ಸುಮಾ ಪುತ್ರನ್ ಅತಿಥಿಗಳನ್ನು ಗೌರವಿಸಿದರು. ರಾಜೇಂದ್ರ ಕಟ್ಟೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net