ಜೀವನದಲ್ಲಿ ಕಲಿತ ವಿಷಯಗಳ ಅಳವಡಿಕೆ

nss shibira
ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ ಪದವಿ ಪೂರ್ವ ವಿಭಾಗದ ಎನ್ನೆಸ್ಸೆಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಅಡುಗೆ ತಯಾರಿಸಿದ ಭರತ ನಾಯಕ ಅವರನ್ನು ಸನ್ಮಾನಿಸಲಾಯಿತು.
Published on

ಹೆಬ್ರಿ: ಶಿಬಿರದಲ್ಲಿ ಕಲಿತ ವಿಷಯಗಳನ್ನು ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ದಿವಾಕರ ಭಂಡಾರಿ ಹೇಳಿದರು.

ಸ.ಹಿ.ಪ್ರಾ.ಶಾಲೆ ಬೊಮ್ಮಾರ ಬೆಟ್ಟು ಕೊಂಡಾಡಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ ಪದವಿ ಪೂರ್ವ ವಿಭಾಗದ ಎನ್ನೆಸ್ಸೆಸ್ ಶಿಬಿರದ ಸಮಾರೋಪದಲ್ಲಿ ಇತ್ತೀಚೆಗೆ ಮಾತನಾಡಿದರು.

ಪ್ರಾಂಶುಪಾಲ ಮಂಜುನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿಗಳಿಗೆ ಏಳು ದಿವಸ ಅಡುಗೆ ತಯಾರಿಸಿದ ಭರತ ನಾಯಕ ಅವರನ್ನು ಸನ್ಮಾನಿಸಲಾಯಿತು. ಸ.ಹಿ.ಪ್ರಾ.ಶಾಲೆ ಕೊಂಡಾಡಿಯಲ್ಲಿ ಶಿಬಿರದ ನೆನಪಿಗಾಗಿ ಹಣ್ಣಿನ ಗಿಡ ನೆಡಲಾಯಿತು.

ಉದ್ಯಮಿ ಮಟ್ಟಾರು ಗಣೇಶ ಕಿಣಿ, ಎಸ್‌ಡಿಎಂಸಿ ಉಪಾಧ್ಯಕ್ಷ ಬಿ.ಎಲ್.ವಿಶ್ವಾಸ, ಸದಸ್ಯರಾದ ಸುಬ್ರಹ್ಮಣ್ಯ ರಾವ್, ವಿಜಯ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶರತ್ ಚಂದ್ರ, ಹಿರಿಯ ಉಪನ್ಯಾಸಕಿ ವೀಣಾ ಡಿ.ನಾಯಕ, ಸ.ಹಿ.ಪ್ರಾ.ಶಾಲೆ ಕೊಂಡಾಡಿಯ ಶಿಕ್ಷಕಿ ವಸುಂದರಾ, ಎಸ್‌ಡಿಎಂಸಿ ಅಧ್ಯಕ್ಷ ಪ್ರಥ್ವಿರಾಜ್ ಭಟ್, ಉಪನ್ಯಾಸಕರಾದ ಜಯಶ್ರೀ, ಗೀತಾ ಕುಮಾರಿ, ಸತೀಶ್ ರೈ, ಮಹೇಶ ಕೊಠಾರಿ, ಎನ್ನೆಸ್ಸೆಸ್ ನಾಯಕ ರಾಹುಲ್ ಉಪಸ್ಥಿತರಿದ್ದರು.

ಉಪನ್ಯಾಸಕ ದೇವದಾಸ ಪ್ರಭು ಸ್ವಾಗತಿಸಿ, ಶಿಬಿರದ ವರದಿ ವಾಚಿಸಿ, ವಂದಿಸಿದರು. ಎನ್ನಸ್ಸೆಸ್ ಘಟಕದ ನಾಯಕಿ ನೀತಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net