ಮಕ್ಕಳ ಭಜನಾ ಶಿಬಿರ ಉದ್ಘಾಟನೆ

bhajane
Published on

ಸುಳ್ಯ: ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಬೆಟ್ಟಂಪಾಡಿ ಹಾಗೂ ಸುಳ್ಯ ತಾಲೂಕು ಭಜನಾ ಪರಿಷತ್ ಸಹಯೋಗದೊಂದಿಗೆ ಸುಳ್ಯ ತಾಲೂಕುಮಟ್ಟದ ಭಜನಾ ಶಿಬಿರ ಸಮಿತಿ ಆಶ್ರಯದಲ್ಲಿ ತಾಲೂಕುಮಟ್ಟದ ಮಕ್ಕಳ ಭಜನಾ ತರಬೇತಿ ಶಿಬಿರ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದ ಸಭಾಂಗಣದಲ್ಲಿ ಸೋಮವಾರ ಪ್ರಾರಂಭಗೊಂಡಿತು.

ಶ್ರೀದೇವಿ ನಾಗರಾಜ್ ಭಟ್ ಶಿಬಿರ ಉದ್ಘಾಟಿಸಿದರು. ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಮೇಲ್ವಿಚಾರಕ ತೀರ್ಥರಾಮ ಶುಭ ಹಾರೈಸಿದರು. ಗಣಪತಿ ಕಲಾ ಕೇಂದ್ರದ ವಿನೋದ್ ದಾಮೋದರ್ ಅರಂಬೂರು ಉಪಸ್ಥಿತರಿದ್ದರು.

ಭಜನಾ ಶಿಬಿರ ಸಮಿತಿಯ ಸಂಚಾಲಕ ಅವಿನ್ ಬೆಟ್ಟಂಪಾಡಿ ಸ್ವಾಗತಿಸಿದರು. ನಾರಾಯಣ ಬೆಟ್ಟಂಪಾಡಿ ವಂದಿಸಿದರು. ಉದಯ್ ಭಾಸ್ಕರ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net