ಚನ್ನಿಗರಾಯಸ್ವಾಮಿ ದೇಗುಲ ಉದ್ಘಾಟನೆ

20 HRS 02
Published on

ಹಿರೀಸಾವೆ: ಹೋಬಳಿಯ ಮತಿಘಟ್ಟ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಚನ್ನಿಗರಾಯಸ್ವಾಮಿ ದೇಗುಲ ಭಾನುವಾರ ಉದ್ಘಾಟನೆಗೊಂಡಿತು.
ಬ್ರಾಹ್ಮಿ ಮುಹೂರ್ತದಲ್ಲಿ ಗೋಪುರಕ್ಕೆ ಕಲಶ ಸ್ಥಾಪನೆ, ಪ್ರಾಣ ಪ್ರತಿಷ್ಠಾಪನೆ, ಕಳಾ ಹೋಮ, ಮಹಾಪೂರ್ಣಾಹುತಿ, ಕುಂಭಾಭಿಷೇಕ ನಡೆಸಲಾಯಿತು. ಶಾಂತಿ ಹೋಮ, ಮಂಡಲ ಪೂಜೆ, ಕಳಶಾರಾಧನೆ, ಸುದರ್ಶನ, ನವಗ್ರಹ, ದೀಕ್ಷಾ, ಕಾಲ ಹೋಮಗಳು ಭಕ್ತರ ಸಮ್ಮುಖದಲ್ಲಿ ಜರುಗಿದವು.

ಧಾರ್ಮಿಕ ಸಭೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಗ್ರಾಮದಲ್ಲಿ ದೇಗುಲಗಳು ಹಾಗೂ ಶಾಲೆಗಳನ್ನು ಸ್ವಚ್ಛತೆ ಮತ್ತು ಸುಂದರವಾಗಿ ಇರಿಸಿಕೊಳ್ಳಬೇಕು. ಮತಿಘಟ್ಟ ಗ್ರಾಮದ ಅಭಿವೃದ್ಧಿಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡಲಾಗುವುದು ಎಂದರು.


ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿದರು. ಜಿಕೆವಿಕೆ ನಿವೃತ್ತ ಅಧಿಕಾರಿ ದೇವರಾಜು, ಗುತ್ತಿಗೆದಾರ ರಂಗೇಗೌಡ, ನಿವೃತ್ತ ಶಿಕ್ಷಕ ನಾಗರಾಜಯ್ಯ, ಎಪಿಎಂಸಿ ನಿರ್ದೇಶಕ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಿ.ಸಿ. ಕೇಶವ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾಮಂಜೇಗೌಡ, ಸದಸ್ಯ ಪ್ರಕಾಶ್, ಪ್ರಭಾಕರ್, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net