ಕೊಣಾಜೆಯಲ್ಲಿ ಬಸ್ ತಂಗುದಾಣ ಉದ್ಘಾಟನೆ

bus stand
ಕೊಣಾಜೆ ಗ್ರಾಮ ಪಂಚಾಯಿತಿ ಬಳಿ ಸಾರ್ವಜನಿಕ ಬಸ್ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಲಾಯಿತು. ವೈಎಫ್‌ಸಿ ಮಾಜಿ ಅಧ್ಯಕ್ಷರಾದ ರಝಾಕ್ ಕಂಗುಹಿತ್ಲು, ಹಸೈನಾರ್, ಸಂಘದ ಅಧ್ಯಕ್ಷ ನಝೀರ್, ಹಸೈನಾರ್ ಕೊಣಾಜೆ, ಸಂಘದ ಕಾರ್ಯದರ್ಶಿ ನಾಸಿರ್ ಕಲ್ಲುಗುಡ್ಡೆ, ಕೊಶಾಧಿಕಾರಿ ಅಶ್ರಫ್ ಒಳಗುಡ್ಡೆ ಮತ್ತಿತರರಿದ್ದರು.
Published on

ಉಳ್ಳಾಲ: ಯುವ ಮಿತ್ರ ಬಳಗ(ವೈಎಫ್ ಸಿ)ದ ವತಿಯಿಂದ ಕೊಣಾಜೆ ಗ್ರಾಮ ಪಂಚಾಯಿತಿ ಬಳಿ ನಿರ್ಮಿಸಲಾದ ಸಾರ್ವಜನಿಕ ಬಸ್ ಪ್ರಯಾಣಿಕರ ತಂಗುದಾಣವನ್ನು ಭಾನುವಾರ ಉದ್ಘಾಟಿಸಲಾಯಿತು.

ವೈಎಫ್‌ಸಿ ಮಾಜಿ ಅಧ್ಯಕ್ಷ ರಜಾಕ್ ಕಂಗುಹಿತ್ಲು ಹಾಗೂ ಹಸೈನಾರ್ ತಂಗುದಾಣ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ನಜೀರ್ ಅಧ್ಯಕ್ಷತೆ ವಹಿಸಿದ್ದರು. ಹಸೈನಾರ್ ಕೊಣಾಜೆ, ಸಂಘದ ಕಾರ್ಯದರ್ಶಿ ನಾಸಿರ್ ಕಲ್ಲುಗುಡ್ಡೆ, ಕೊಶಾಧಿಕಾರಿ ಅಶ್ರಫ್ ಒಳಗುಡ್ಡೆ, ಪದಾಧಿಕಾರಿಗಳಾದ ಇಬ್ರಾಹಿಂ ಮೂಸ, ಅಶ್ರಫ್ ವೈಎಂಸಿ, ಶರೀಫ್ ಕಂಗುಹಿತ್ಲು, ಅನ್ವರ್ ಸಾದತ್, ಮುನೀರ್ ಕಂಗುಹಿತ್ಲು, ಶರೀಫ್ ಪರಂಡೆ, ಹಕೀಮ್ ವೆಲ್ಡರ್, ರೆಹಮಾನ್ ಕಂಗುಹಿತ್ಲು ಮೊದಲಾದವರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ರಿಯಾಝ್ ಸ್ವಾಗತಿಸಿದರು. ಸಿದ್ದೀಕ್ ವೈಎಂಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net