ಆಂಬುಲೆನ್ಸ್ ಚಾಲಕ-ಮಾಲೀಕರ ಸಂಘ ಕಚೇರಿ ಉದ್ಘಾಟನೆ

ambyulance
Published on

ಸುಳ್ಯ: ತಾಲೂಕು ಆಂಬುಲೆನ್ಸ್ ಚಾಲಕರು ಮತ್ತು ಮಾಲೀಕರ ಸಂಘದ ನೂತನ ಕಚೇರಿ ಇತ್ತೀಚೆಗೆ ಉದ್ಘಾಟನೆಗೊಂಡಿತು.

ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ನೂತನ ಸಂಸ್ಥೆ ಉದ್ಘಾಟಿಸಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಶರತ್ ತೊಡಿಕಾನ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ವರ್ತಕ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ್ ರೈ, ಸುಳ್ಯ ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಮುಖಂಡರಾದ ಹರೀಶ್ ಕಂಜಿಪಿಲಿ, ಶಾಹುಲ್ ಹಮೀದ್ ಕುತ್ತಮಟ್ಟೆ, ಹಾಜಿ ಮುಸ್ತಫಾ, ಉಮ್ಮರ್ ಕೆ.ಎಸ್. ಶುಭ ಹಾರೈಸಿದರು.

ಆಂಬುಲೆನ್ಸ್ ಚಾಲಕ ಶ್ರೀಧರ ಅವರನ್ನು ಸನ್ಮಾನಿಸಲಾಯಿತು. ಸಂಘದ ಲೋಗೋ ಬಿಡುಗಡೆ ನಡೆಯಿತು. ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಉದ್ಯಮಿ ಹಾಜಿ ಅಬೂಬಕ್ಕರ್ ಬಿ.ಎಂ, ಶರೀಫ್ ಕಂಠಿ, ಸುಳ್ಯ ಅಗ್ನಿ ಶಾಮಕ ಕಚೇರಿ ಮುಖ್ಯ ಅಧಿಕಾರಿ ಸೋಮನಾಥ, ಅಕ್ಷಯ ಚಾರಿಟೆಬಲ್ ಸಂಸ್ಥೆಯ ಸಂಚಾಲಕ ಅಬ್ದುಲ್ ಕರೀಂ ಕೆದಿಕ್ಕಾರ್, ವೆನ್ಲಾಕ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಆಂಟೋನಿ ಡಿಸೋಜ, ಕಟ್ಟಡ ಮಾಲೀಕ ಅಬ್ದುಲ್ಲಾ ಜಾಲ್ಸೂರು, ಕಲಂದರ್ ಎಲಿಮಲೆ, ಉದ್ಯಮಿ ಫೈಝಲ್, ಕಟ್ಟೆಕ್ಕಾರ್ಸ್ ಸಂಘದ ಗೌರವಾಧ್ಯಕ್ಷ ಶಿವಪ್ರಸಾದ್, ಕೋಶಾಧಿಕಾರಿ ರಫೀಕ್ ಬಿ.ಎಂ. ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ಸ್ವಾಗತಿಸಿದರು. ಉಪಾಧ್ಯಕ್ಷ ಉನೈಸ್ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net