

ಮೂಡುಬಿದಿರೆ: ಔಷಧಾಲಯ ಅಥವಾ ಔಷಧ ವಿಜ್ಞಾನ ಎಂಬುದು ಕೇವಲ ಕುಳಿತು ವಾಡುವ ವ್ಯಾಪಾರಿ ವತ್ತಿಯಲ್ಲ. ಅದು ವೈದ್ಯರು ಮತ್ತು ರೋಗಿಗಳ ಮಧ್ಯದ ಸೇತು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಆಳ್ವಾಸ್ ಕಾಲೇಜಿನ ಧನ್ವಂತರಿ ಸಭಾಭವನದಲ್ಲಿ ಸೋಮವಾರ ಆಳ್ವಾಸ್ ಫಾರ್ಮಸಿ ಕಾಲೇಜು ಉದ್ಘಾಟನೆ ಮತ್ತು ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ವಾತನಾಡಿದರು.
ಶಾಸಕ ಉವಾನಾಥ ಕೋಟ್ಯಾನ್, ವಾಜಿ ಶಾಸಕ ಅಭಯಚಂದ್ರ ಜೈನ್, ಉದ್ಯಮಿ ಸಿ.ಎಚ್.ಅಬ್ದುಲ್ ಗೂರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಡಾ.ಹನಾ ಆಳ್ವ ಉಪಸ್ಥಿತರಿದ್ದರು.
ಆಳ್ವಾಸ್ ಫಾರ್ಮಸಿ ಕಾಲೇಜಿನ ಡಾ.ಎಂ.ಮಂಜುನಾಥ್ ಶೆಟ್ಟಿ ಸ್ವಾಗತಿಸಿದರು. ಪಿಯು ಕಾಲೇಜಿನ ಉಪನ್ಯಾಸಕ ರಾಜೇಶ್ ಡಿಸೋಜ ನಿರೂಪಿಸಿದರು.