

ವಿಜಯವಾಣಿ ಸುದ್ದಿಜಾಲ ಗುರುಪುರ
ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ 2025ರ ಮಾರ್ಚ್ 16ರಂದು ನಡೆಯಲಿರುವ ಬ್ರಹ್ಮಕಲಶೋತ್ಸವ ಸಂದರ್ಭ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆಗೆ ರಚಿಸಲಾದ ಬ್ರಹ್ಮಕಲಶೋತ್ಸವ ಸಮಿತಿಗೆ ಸುಜಿತ್ ಆಳ್ವ ಏತಮೊಗರು ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಅದ್ಯಪಾಡಿ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಜಿತ್ ಆಳ್ವ ಏತಮೊಗರುಗುತ್ತು ಮಾತನಾಡಿ, ಮಾರ್ಚ್ ತಿಂಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೈಲು ಏತಮೊಗರು ದೊಡ್ಡಮನೆ ಹರೀಶ್ ಶೆಟ್ಟಿ, ಶೆಡ್ಡೆ ಮಂಜುನಾಥ ಭಂಡಾರಿ, ಭುಜಂಗ ಕುಲಾಲ್ ಅದ್ಯಪಾಡಿ, ಉಮೇಶ್ ಶೆಟ್ಟಿ ಶೆಡ್ಡೆ, ಕಿರಣ್ ಪಕ್ಕಳ ಪೆರ್ಮಂಕಿಗುತ್ತು ಮಾತನಾಡಿದರು.
ಜೀರ್ಣೋದ್ಧಾರ ಸಮಿತಿಗೆ ಬೈಲುಬೀಡಿನ ಬಳಿಯ ಕೊಳಂಬೆ ಕೇಸರಿ ಫ್ರೆಂಡ್ಸ್ ಕ್ಲಬ್ ಮತ್ತು ಅದ್ಯಪಾಡಿಯ ಜೈ ತುಳುನಾಡು ಫ್ರೆಂಡ್ಸ್ ತಲಾ 50 ಸಾವಿರ ರೂ. ಹಾಗೂ ಅದ್ಯಪಾಡಿಪದವಿನ ಶ್ರೀ ಜನನಿ ಸ್ತ್ರೀಶಕ್ತಿ ಸಂಘ 10 ಸಾವಿರ ರೂ. ದೇಣಿಗೆ ನೀಡಿತು.
ರಮಾನಾಥ ಅತ್ತಾರ್ ಏತಮೊಗರುಗುತ್ತು(ಚಿತ್ತಣ್ಣ), ರಂಗನಾಥ ಹೆಗ್ಡೆ ಅದ್ಯಪಾಡಿಗುತ್ತು, ಬಾಲಕೃಷ್ಣ ರೈ ಕೊಳಂಬೆಗುತ್ತು, ಅಶ್ವಿನ್ ಬಲ್ಲಾಳ ಬೈಲುಬೀಡು, ಸಿಎ ಗಣೇಶ್ ರಾವ್, ಡಾ.ಹರೀಶ್ ಶೆಟ್ಟಿ ಮೂಡುಕರೆಗುತ್ತು ಹಾಗೂ ಕೊಳಂಬೆ, ಕಂದಾವರ, ಅದ್ಯಪಾಡಿ ಗ್ರಾಮ ಸಮಿತಿಗಳ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ಕಂದಾವರ ಸ್ವಾಗತಿಸಿದರು. ವಸಂತ ಕೆ. ಪ್ರಸ್ತಾವನೆಗೈದರು. ಸುಕೇಶ್ ಮಾಣೈ ವಂದಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸುಜಿತ್ ಆಳ್ವ ಏತಮೊಗರುಗುತ್ತು, ಪ್ರಧಾನ ಕಾರ್ಯದರ್ಶಿಯಾಗಿ ವಸಂತ ಕೆ., ಕಾರ್ಯದರ್ಶಿಯಾಗಿ ಸುಕೇಶ್ ಮಾಣೈ, ಕೋಶಾಧಿಕಾರಿಯಾಗಿ ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ, ಜತೆ ಕಾರ್ಯದರ್ಶಿಯಾಗಿ ಸುಜೀರ್ ಶೆಟ್ಟಿ ಬೈಲುಪೇಟೆ ಅವರನ್ನು ಆಯ್ಕೆ ಮಾಡಲಾಯಿತು.