

ಹೆಬ್ರಿ: ಉತ್ತಮ ಸಂಸ್ಕಾರಯುತ ಶಿಕ್ಷಣದಿಂದ ವಿದ್ಯಾವಂತ ಉತ್ತಮ ವ್ಯಕ್ತಿ ನಿರ್ವಾಣವಾಗುತ್ತಾನೆ. ಆದ್ದರಿಂದ ವಿದ್ಯಾರ್ಥಿಗಳು ಶಿಸ್ತು ಬೆಳೆಸಿಕೊಳ್ಳಲು ಪ್ರಯತ್ನ ಪಡಬೇಕು ಅಂತಹ ಎಲ್ಲ ಅವಕಾಶಗಳನ್ನು ನಮ್ಮ ಸಂಸ್ಥೆ ನೀಡುವ ಮೂಲಕ ಸವಾಜಕ್ಕೆ ವಾದರಿಯಾಗಿದೆ ಎಂದು ಅಮತ ಭಾರತಿ ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ ಹೇಳಿದರು.
ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ ಆಚರಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಅರಸಿನ ಕುಂಕುಮ ಹಚ್ಚಿ, ಆರತಿ ಬೆಳಗಿ ಸ್ವಾಗತಿಸಲಾಯಿತು. ಸಿಹಿ ತಿಂಡಿ ನೀಡಲಾಯಿತು.
ಟ್ರಸ್ಟ್ ಕಾರ್ಯದರ್ಶಿ ಗುರುದಾಸ್ ಶೆಣೈ, ವಿಶ್ವಸ್ಥರಾದ ಬಾಲಕೃಷ್ಣ ಮಲ್ಯ, ಭಾಸ್ಕರ ಜೋಯಿಸ್, ಸುಧೀರ್ ನಾಯಕ್, ವಿಷ್ಣುಮೂರ್ತಿ ನಾಯಕ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್ , ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಶಕುಂತಲಾ ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗದ ಶಿಕ್ಷಕಿ ಪ್ರಜಾತಾ ಸ್ವಾಗತಿಸಿ, ಉಪಮುಖ್ಯಶಿಕ್ಷಕ ಮಹೇಶ್ ಹೈಕಾಡಿ ವಂದಿಸಿದರು. ಪ್ರೌಢಶಾಲಾ ಶಿಕ್ಷಕಿ ಸಾವಿತ್ರಿ ಕಿಣಿ ನಿರೂಪಿಸಿದರು.