ಅಧಿಕಾರಿಗಳಿಂದ ಸಭೆಗೆ ಅಸಮರ್ಪಕ ಮಾಹಿತಿ

11 SIRWAR 02
ಸಿರವಾರ ಪ್ರವಾಸಿ ಮಂದಿರದಲ್ಲಿ ತಹಸೀಲ್ದಾರ್ ರವಿ ಎಸ್ ಅಂಗಡಿ ನೇತೃತ್ವದಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಸಂಘಟನೆಗಳ ಸಭೆ ನಡೆಯಿತು. ತಾಪಂ ಇಒ ಶಶಿಧರ ಸ್ವಾಮಿ, ಬಿಇಒ ಚಂದ್ರಶೇಖರ ದೊಡ್ಮನಿ, ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಶಿವಶಂಕರ್, ಎಇಇ ವಿಜಯಲಕ್ಷ್ಮೀ ಪಾಟೀಲ್, ಸಹಾಯಕ ಕೃಷಿ ನಿರ್ದೇಶಕ ಗುರುಸ್ವಾಮಿ, ಪಪಂ ನ ಹಂಪಯ್ಯ ಪಾಟೀಲ್, ಪಶು ಇಲಾಖೆಯ ಬೇಗ್, ಶಿರಸ್ತೆದಾರ ಫಕ್ರುದ್ದೀನ್, ಕಂದಾಯ ಅಧಿಕಾರಿ ಶ್ರೀನಾಥ ಇತರರಿದ್ದರು.
Published on

ಸಿರವಾರ:ಸ್ಥಳೀಯ ಪ್ರವಾಸಿ ಮಂದಿರದಲ್ಲಿ ತಹಸೀಲ್ದಾರ್ ರವಿ ಎಸ್ ಅಂಗಡಿ ನೇತೃತ್ವದಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಸಂಘಟನೆಗಳ ಸಭೆ ಗುರುವಾರ ನಡೆಯಿತು.

ರೈತರು ಮತ್ತು ವಿವಿಧ ಸಂಘಟನೆ ಮುಖಂಡರು ಮಾತನಾಡಿ, ಬೆಳೆ ಪರಿಹಾರ ವಿತರಣೆ ಇನ್ನೂ ಬಾಕಿ ಇದ್ದು, ಸರಿಯಾಗಿ ವಿತರಣೆಯಾಗಿಲ್ಲ. ಪಿಡಿಒಗಳು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸಿರವಾರ- ಹಟ್ಟಿ ಮತ್ತು ಸಿರವಾರ-ಲಿಂಗಸುಗೂರು ಮಾರ್ಗವಾಗಿ ಹೋಗುವ ಕೆಲ ಬಸ್‌ಗಳು ನಿಲ್ಲಿಸುತ್ತಿಲ್ಲ. ವಿದ್ಯಾರ್ಥಿಗಳು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಉದ್ಯೋಗ ಖಾತರಿ ಯೋಜನೆಯಲ್ಲಿ ಕಾಲುವೆ ಸ್ವಚ್ಛಗೊಳಿಸಲು ಪಿಡಿಒಗಳು ಕ್ರಮ ಕೈಗೊಳ್ಳಬೇಕು. ಬಲ್ಲಟಗಿ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಿಸಿದ ಮನೆಗಳಿಗೆ ನಾಲ್ಕು ವರ್ಷಗಳಿಂದ ಜಿಪಿಎಸ್, ಹಣ ಬಿಡುಗಡೆ ಆಗಿಲ್ಲ. ಮನೆ ನಿರ್ಮಾಣ ಮಾಡದೆ ಇರುವವರ ಖಾತೆಗೆ ಹಣ ಜಮಾ ಆಗಿದೆ. ಗ್ರಾಪಂಗಳಲ್ಲಿ ಇರುವ ಕಸ ವಿಲೇವಾರಿ ವಾಹನಗಳ ಸದ್ಬಳಕೆಯಾಗುತ್ತಿಲ್ಲ. ಪಶು ಇಲಾಖೆ ಅಧಿಕಾರಿಗಳು ರೈತರ ಫೋನ್ ಕರೆ ಸ್ವೀಕರಿಸುತ್ತಿಲ್ಲ ಎಂಬುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಸಭೆಯಲ್ಲಿ ತಹಸೀಲ್ದಾರ್‌ಗೆ ತಿಳಿಸಿದರು. ಇನ್ನೂ ಕೆಲ ಅಧಿಕಾರಿಗಳು ಸಭೆಯಲ್ಲಿ ಸಮರ್ಪಕವಾಗಿ ಮಾಹಿತಿ ಇಲ್ಲದಿರುವುದರಿಂದ ರೈತರ ಸಂಘದವರು ಸಿಡಿಮಿಡಿಗೊಂಡರು.

ತಹಸೀಲ್ದಾರ್ ರವಿ ಎಸ್ ಅಂಗಡಿ ಮಾತನಾಡಿ, ಸಾರ್ವಜನಿಕರು ಪೋನ್ ಕರೆ ಮಾಡಿದರೆ ಅಧಿಕಾರಿಗಳು ಕೂಡಲೆ ಸ್ಪಂದಿಸಬೇಕು. ಇಲಾಖೆ ಸಂಬಂಧಿಸಿದ ಅಧಿಕಾರಿಗಳು ಎಲ್ಲಾ ಸಮಸ್ಯೆಗಳಿಗೆ ಕೂಡಲೇ ಪರಿಹರಿಸಬೇಕು ಎಂದರು. ಇನ್ನೂ ಕೆಲ ಸಮಸ್ಯೆಗಳಿಗೆ ತಾಪಂ ಇಒ ಸ್ಥಳಕ್ಕೆ ಖುದ್ದಾಗಿ ಭೇಟಿ ಸಮಸ್ಯೆ ಪರಿಹರಿಸಲಿದ್ದಾರೆ ಎಂದು ತಿಳಿಸಿದರು.

ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ರಾಜ್ಯ ಕಾರ್ಯದರ್ಶಿ ಸೂಗೂರಯ್ಯ ಆರ್ ಎಸ್ ಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net